ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಎಆರ್‌ಜಿ ವಿದ್ಯಾರ್ಥಿ ಉಮೇಶ್ ಗೆ ಚಿನ್ನ

ಸುದ್ದಿ360 ದಾವಣಗೆರೆ, ಜು.13: ಥಾಯ್ಲೆಂಡ್‌ನ ಸ್ಪೋರ್ಟ್ಸ್ ಯೂನಿವರ್ಸಿಟಿ ಆಫ್ ಚೌನಬುರಿ ವತಿಯಿಂದ ಜೂನ್ ತಿಂಗಳಲ್ಲಿ ಆಯೋಜಿಸಿದ್ದ ಥಾಯ್ಲೆಂಡ್ ಸೌಥ್ ಏಷಿಯನ್ ಗೇಮ್ಸ್-2022ರ ಕುಸ್ತಿ ಪಂದ್ಯದಲ್ಲಿ ನಗರದ ಎಆರ್‌ಜಿ ಕಾಲೇಜು ವಿದ್ಯಾರ್ಥಿ ಬಿ. ಉಮೇಶ ಚಿನ್ನದ ಪದಕ ಗೆದ್ದಿದ್ದಾರೆ.

ಪಂದ್ಯಾವಳಿಯ 65 ಕೆ.ಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಸಿದ್ದ ಎಆರ್‌ಜಿ ಕಾಲೇಜು ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಉಮೇಶ್, ಮಲೇಶಿಯಾ ಕುಸ್ತಿಪಟು ವಿರುದ್ಧ 10-00 ಅಂತರದಲ್ಲಿ ಭರ್ಜರಿ ಗೆಲುವು ಸಾಸಿದರು. ಬಿ. ಉಮೇಶ ಈಗಾಗಲೇ ಮೂರು ರಾಷ್ಟ್ರೀಯ ಪದಕಗಳ ಸಾಧನೆ ಮಾಡಿದ್ದು, ಇದೀಗ ಅಂತಾರಾಷ್ಟ್ರೀಯ ಸಾಧನೆ ಗೈದು ರಾಜ್ಯ, ದಾವಣಗೆರೆ ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲ ಪ್ರೊ.ಕೆ.ಎಸ್. ಬಸವರಾಜಪ್ಪ, ಡಾ.ಜೆ.ಕೆ. ಮಲ್ಲಿಕಾರ್ಜುನಪ್ಪ, ಪ್ರೊ. ಅನಿತಾ ಕುಮಾರಿ, ಡಾ.ಎಚ್.ಆರ್. ತಿಪ್ಪೇಸ್ವಾಮಿ, ಪ್ರೊ. ರಮೇಶ್ ಪೂಜಾರ್, ಡಾ. ಚಮನ್‌ಸಾಬ್, ಪ್ರದೀಪ, ಕಾಲೇಜಿನ ಸಿಬ್ಬಂದಿ ಉಮೇಶರನ್ನು ಅಭಿನಂದಿಸಿದ್ದಾರೆ.

Leave a Comment

error: Content is protected !!