ಅಪರಾಧ ಪ್ರಕರಣ ಪತ್ತೆಯಲ್ಲಿ ನೆರವಾಗುತ್ತಿದ್ದ ‘ತುಂಗಾ’ಕ್ಕೆ ಜಿಲ್ಲಾ ಪೊಲೀಸ್ ನಿಂದ ಭಾವಪೂರ್ಣ ಶ್ರದ್ಧಾಂಜಲಿ

ಸುದ್ದಿ360 ದಾವಣಗೆರೆ, ಆ.26:  ಹಲವು ಅಪರಾಧ ಪ್ರಕರಣ ಪತ್ತೆಯಲ್ಲಿ ಪೊಲೀಸರಿಗೆ ನೆರವಾಗುವ ಮೂಲಕ ಪ್ರಮುಖ ಪಾತ್ರ ನಿರ್ವಹಿಸಿದ್ದ ಶ್ವಾನ ದಳದ ತುಂಗಾ ಇಂದು ವಿಧಿವಶವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತುಂಗಾ ನಿಧನಕ್ಕೆ ಜಿಲ್ಲಾ ಪೊಲೀಸ್ ನಲ್ಲಿ ದುಃಖ ಮಡುಗಟ್ಟಿದ್ದು, ಅಗಲಿದ ತುಂಗಾಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ದಾವಣಗೆರೆ ಜಿಲ್ಲಾ  ಅಪರಾಧ ವಿಭಾಗದಲ್ಲಿ ತುಂಗಾ ಶ್ವಾನವು ಇಲಾಖೆಗೆ ತನ್ನದೇ ಆದ ಅಮೂಲ್ಯ ಸೇವೆ ಸಲ್ಲಿಸಿತ್ತು.

Leave a Comment

error: Content is protected !!