ಆಗಸ್ಟ್ 12ಕ್ಕೆ ಗಾಳಿಪಟ-2 ರಾಜ್ಯಾದ್ಯಂತ ತೆರೆಗೆ

ಸುದ್ದಿ360, ಬೆಂಗಳೂರು, ಜು.18: ರೋಚಕ ತಿರುವುಗಳನ್ನೊಳಗೊಂಡ, ಹಾಸ್ಯಭರಿತ ಪ್ರಸಂಗಗಳೊಂದಿಗೆ ಸಾಗುವ ಪ್ರಯಾಣದ ಮೂವರು ಹುಡುಗರು ಮತ್ತು ಅವರ ಪ್ರೇಮಗಳ ಕತೆ ಹೊಂದಿರುವ ಗಾಳಿಪಟ-2 ಚಲನಚಿತ್ರ ಮುಂಬರುವ ಆಗಸ್ಟ್ 12ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಮಡೆನೂರು ಮನು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ಬರೂ ಕಲಾವಿದರು, ಗಣೇಶ್, ದಿಗಂತ್ ಹಾಗೂ ಭೂಷಣ್ ಎನ್ನುವ ಮೂವರು ಪ್ರಾಣ ಸ್ನೇಹಿತರ ನಡುವೆ ನಡೆಯುವ ಕಥೆಯ ಹಂದರವನ್ನು ಹೊಂದಿದೆ. ಮೂವರು ಪ್ರಾಣ ಸ್ನೇಹಿತರು ನೀರುಕೋಟೆ ಎನ್ನುವ ಊರಿನ ಕನ್ನಡ ಶಾಲೆಯಲ್ಲಿ ಓದಿರುತ್ತಾರೆ. ಅಲ್ಲಿಗೆ ಹೋದ ವೇಳೆ ಈ ಮೂವರು ಗೆಳೆಯರು  ಕಿಶೋರ್ ಕುಮಾರ್ ಎಂಬ ಹೆಸರಿನ ಶಿಕ್ಷಕರನ್ನು ಭೇಟಿ ಮಾಡುತ್ತಾರೆ.

ಈ ವೇಳೆ ಶಿಕ್ಷಕರ ವೈಯಕ್ತಿಕ ಕಾರಣದಿಂದಾಗಿ ಮೂವರು ಸ್ನೇಹಿತರು ಒಂದೇ ಕೋಣೆಯಲ್ಲಿ ಉಳಿಯುತ್ತಾರೆ. ಹಲವು ವರ್ಷಗಳ ನಂತರ ಮತ್ತೆ ಸ್ನೇಹಿತರು ಸೇರಿ ತಮ್ಮ ಗುರುಗಳಿಗೆ ಸಹಾಯ ಮಾಡಲು ಒಂದಾಗುವ ಸಮಯಕ್ಕೆ ಸರಿಯಾಗಿ ಅವರವರ ಬದುಕುಗಳ ಪ್ರೇಮ ಸಂಬಂಧಗಳನ್ನು ಸರಿ ಮಾಡಿ ಕೊಳ್ಳುವ ಅವಕಾಶ ಸಿಗುತ್ತದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಇದ್ದರು.

Leave a Comment

error: Content is protected !!