ಸುದ್ದಿ360 ನವದೆಹಲಿ ಜ.12: ಮಾಜಿ ಕೇಂದ್ರ ಸಚಿವ ಮತ್ತು ಆರ್ಜೆಡಿ ನಾಯಕ ಶರದ್ ಯಾದವ್ ಅವರು ಜ. 12 ರಂದು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಟ್ವಿಟರ್ನಲ್ಲಿ “ಪಾಪಾ ನಹೀ ರಹೇ (ಪಾಪಾ ಇನ್ನಿಲ್ಲ)” ಎಂದು ತಂದೆಯ ನಿಧನ ವಾರ್ತೆಯನ್ನು ಖಚಿತಪಡಿಸಿದ್ದಾರೆ.
ಮಾಜಿ ಸಚಿವ ಶರದ್ ಯಾದವ್ ಅವರ ಆರೋಗ್ಯ ಹದಗೆಟ್ಟಿದ್ದ ಕಾರಣ ಅವರನ್ನು ಗುರುಗ್ರಾಮ್ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.