ಆ್ಯಂಥೆ ಪರೀಕ್ಷೆ ನೋಂದಣಿಗೆ ಚಾಲನೆ – ಇಬ್ಬರಿಗೆ ನಾಸಾಗೆ ಭೇಟಿ ನೀಡುವ ಅವಕಾಶ !

ಸುದ್ದಿ360 ದಾವಣಗೆರೆ, ಸೆ. 06: ನಗರದ ಅಕ್ಕಮಹಾದೇವಿ ರಸ್ತೆಯ ಎವಿಕೆ ಕಾಲೇಜು ಎದುರಿರುವ ಆಕಾಶ್ ಬೈಜೂಸ್ ಶಾಖೆಯಲ್ಲಿ ಮಂಗಳವಾರ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆ-2022ರ ದಿನಾಂಕಗಳನ್ನು ಘೋಷಿಸಿ, ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಯಿತು.

ಆಕಾಶ್ ಬೈಜೂಸ್ ಸಂಸ್ಥೆ ಉಪ ನಿರ್ದೇಶಕ ಸುಧೀರ್ ಕುಮಾರ್ ಮಾತನಾಡಿ, ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಮ್ (ಆ್ಯಂಥೆ) ರಾಷ್ಟ್ರಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆಯಾಗಿದೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಮಾದರಿಯಲ್ಲಿ ನಡೆಯಲಿದ್ದು, ನ.5ರಿಂದ ನ.13ರವರೆಗೆ ಬೆಳಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ಆನ್‌ಲೈನ್‌ನಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು.

ನ.6 ಮತ್ತು 13ರಂದು ದೇಶಾದ್ಯಂತ ಇರುವ 285ಕ್ಕೂ ಹೆಚ್ಚು ಆಕಾಶ್ ಬೈಜೂಸ್ ಕೇಂದ್ರಗಳಲ್ಲಿ ಆಫ್‌ಲೈನ್ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30ರಿಂದ 11.30ರವರೆಗೆ ಹಾಗೂ ಸಂಜೆ 4ರಿಂದ 5 ಗಂಟೆವರೆಗೆ ಎರಡು ಅವಧಿಯಲ್ಲಿ ನಡೆಯುವ ಆಫ್‌ಲೈನ್ ಪರೀಕ್ಷೆಯು 90 ಅಂಕಗಳದ್ದಾಗಿದ್ದು, 35 ಬಹು ಆಯ್ಕೆ ಪ್ರಶ್ನೆಗಳು ಇರಲಿವೆ. ಫಲಿತಾಂಶ ಅದೇ ದಿನ ಲಭ್ಯವಾಗಲಿದೆ ಎಂದು ತಿಳಿಸಿದರು.

ನಾಸಾಗೆ ಭೇಟಿ ನೀಡುವ ಅವಕಾಶ

7ರಿಂದ ದ್ವಿತೀಯ ಪಿಯುಸಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಗ್ರ ಇಬ್ಬರು ವಿದ್ಯಾರ್ಥಿಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಭೇಟಿ ನೀಡುವ ಅವಕಾಶ ಪಡೆಯಲಿದ್ದಾರೆ, ಇದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ಆಕಾಶ್ ಭರಿಸಲಿದೆ. ಇದರೊಂದಿಗೆ ಶೇ.100ರಷ್ಟು ವಿದ್ಯಾರ್ಥಿವೇತನ, ನಗದು ಬಹುಮಾನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಹೇಳಿದರು.

ಇದೇ ವೇಳೆ 2021ನೇ ಸಾಲಿನ ಆ್ಯಂಥೆ ವಿಜೇತರಾದ ನಗರದ ಶುಭ, ಹರ್ಷಿತಾ, ವಿಶಾಲ್ ಕಿರಣ್, ಲಿಖಿತಾ ಮತ್ತು ರಘುನಂದನ್‌ಗೆ ಪ್ರಮಾಣಪತ್ರ ವಿತರಿಸಲಾಯಿತು. ಸಂಸ್ಥೆಯ ಸಹಾಯಕ ನಿರ್ದೇಶಕ ಎಂ. ಕಿಶೋರ್, ಪ್ರಾಂತೀಯ ವ್ಯವಹಾರಗಳ ಮುಖ್ಯಸ್ಥ ಪಿ.ಜಿ. ವಿಶ್ವನಾಥ್, ಶಾಖಾ ಮುಖ್ಯಸ್ಥ ಎಂ. ನಿತಿನ್, ಕಲಂದರ್ ಇತರರು ಇದ್ದರು.

Leave a Comment

error: Content is protected !!