ಇಗ್ನೋದಿಂದ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಸುದ್ದಿ360, ದಾವಣಗೆರೆ, ಜು.15: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು ಜುಲೈ  2022 ರ ಸಾಲಿಗೆ ವಿವಿಧ ಸರ್ಟಿಫಿಕೇಟ್ ಕೋರ್ಸ್,  ಡಿಪ್ಲೊಮಾ , ಪಿ.ಜಿ.ಡಿಪ್ಲೊಮಾ , ಪದವಿ ಮತ್ತು ಸ್ನಾತಕೋತ್ತರ ಪದವಿ ಒಳಗೊಂಡಂತೆ ವಿವಿಧ ಶೈಕ್ಷಣಿಕ  ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವ್ಯಾಪ್ತಿಯ ಸಹಾಯಕ ಪ್ರಾದೇಶಿಕ ನಿರ್ದೇಶಕರಾದ ಹೇಮಾಮಾಲಿನಿ ಮಾಹಿತಿ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಿಣಿಯರು, ವೃತ್ತಿಪರರು, ವಿದ್ಯಾರ್ಥಿಗಳು, ನಿವೃತ್ತಿ ಹೊಂದಿರುವವರೂ ಸೇರಿದಂತೆ 18 ವರ್ಷ ಪೂರೈಸಿದ ಯಾರೇ ಆದರೂ ಸಂಬಂಧಿತ ಶೈಕ್ಷಣಿಕ ಅರ್ಹತೆಗನುಗುಣವಾಗಿ ಯಾವುದೇ ಕೋರ್ಸ್ಗೆ ಪ್ರವೇಶ ತೆಗೆದುಕೊಳ್ಳಬಹುದಾಗಿದೆ.

ಈ ಮೊದಲು ಎಂಬಿಎ ಪ್ರವೇಶ ಪಡೆಯುವವರು ಪ್ರವೇಶ ಪರೀಕ್ಷೆ ಎದುರಿಸಬೇಕಿತ್ತು ಆದರೆ ಪ್ರಸಕ್ತ ವರ್ಷದಿಂದ ನೇರವಾಗಿ ಎಂಬಿಎ ಪ್ರವೇಶ ಪಡೆಯಬಹುದಾಗಿದೆ. ಮತ್ತು ಯಾವುದೇ ವಿಶ್ವ ವಿದ್ಯಾಲಯದಲ್ಲಿ ಓದುತ್ತಿದ್ದವರೂ ಸಹ  ಇಗ್ನೋದಲ್ಲಿ ಇನ್ನೊಂದು ಪದವಿಗೆ ಪ್ರವೇಶ ಪಡೆಯಬಹುದಾಗಿದ್ದು, ಒಂದೇ ಶೈಕ್ಷಣಿಕ ವರ್ಷದಲ್ಲಿ ಎರಡು ಪದವಿ ಹೊಂದುವ ಅವಕಾಶ ಇರುವುದಾಗಿ ತಿಳಿಸಿದರು.

ಇಗ್ನೋ 21 ಸ್ಕೂಲ್ ಆಫ್ ಸ್ಟಡೀಸ್ ಮತ್ತು 67 ಪ್ರಾದೇಶಿಕ ಕೇಂದ್ರಗಳು ಸುಮಾರು 2000 ಅಧ್ಯಯನ ಕೇಂದ್ರ ಮತ್ತು 20 ಸಾಗರೊತ್ತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ ಅವರು, ವಿದ್ಯಾರ್ಥಿಗಳಿಗೆ ಆನ್ಲೈನ್ ಕಲಿಕೆಯ ಬೆಂಬಲ, ಅಧ್ಯಯನ ಸಾಮಾಗ್ರಿಗಳು, ಸ್ಟಡಿ ಸೆಂಟರ್, ಉದ್ಯೋಗ ಮಾಹಿತಿ ಕೇಂದ್ರಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯುಕ್ತ ಸೌಲಭ್ಯಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿದರು.

ಎಸ್ ಸಿ,ಎಸ್ ಟಿ, ಒಬಿಸಿ  ಮತ್ತು ದೈಹಿಕವಾಗಿ ವಿಕಲಾಂಗ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಸೌಲಭ್ಯ, ಮೆರಿಟ ವಿದ್ಯಾರ್ಥಿ ವೇತನ ಸೌಲಭ್ಯ ವಿದ್ದು,  ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಹಾಗೂ  ಜೈಲು ಕೈದಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಇದ್ದು, ಆಸಕ್ತ ವಿದ್ಯಾರ್ಥಿಗಳು https://ignouadmission.samarth.edu.in ಗೆ ಅಪ್‌ಲೋಡ್ ಮಾಡುವ ಮೂಲಕ ತಮ್ಮ ಅಧ್ಯಯನ ಕೇಂದ್ರದ ಆಯ್ಕೆಯೊಂದಿಗೆ ಜುಲೈ 31 , 2022 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ , rcbangalore@ignou.ac.in ಗೆ ಮೇಲ್ ಮಾಡಿ‌ ಅಥವಾ ವಾಟ್ಸಪ್ ಸಂಖ್ಯೆ 9449337272 ಗೆ SMS ಮಾಡಿ ಅಥವಾ 080-29607272 ಗೆ ಕರೆ ಮಾಡಿ . ಆಸಕ್ತ ವಿದ್ಯಾರ್ಥಿಗಳು ದಾವಣಗೆರೆ ಇಗ್ನೊ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಬಿಐಇಟಿ ನಿರ್ದೇಶಕ ಪ್ರೊ.ವೈ ವೃಷಬೇಂದ್ರಪ್ಪ, ಇಗ್ನೋ ಸಂಯೋಜಕ ಡಾ.ಅಶೋಕ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!