ಸುದ್ದಿ360 ದಾವಣಗೆರೆ, ಜೂನ್ 18: ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಉಚಿತ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಈ ಉಚಿತ ಚಿತ್ರ ಬರೆಯುವ ಸ್ಪರ್ಧೆಗೆ ಕರ್ನಾಟಕ ವಿವಿಧ ಜಿಲ್ಲೆಗಳೂ ಸೇರಿದಂತೆ ನೆರೆ ರಾಜ್ಯಗಳಿಂದಲೂ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸುಮಾರು ಒಂದು ಸಾವಿರದ ಎಂಟುನೂರ ಆರವತ್ತಮೂರು ಚಿತ್ರಗಳು ಬಂದಿದ್ದವು ಎಂದು ಗಣೇಶ್ ಶೆಣೈ ತಿಳಿಸಿದ್ದಾರೆ.
ಸ್ಪರ್ಧಿಗಳ ವಯಸ್ಸಿಗೆ ಅನುಗುಣವಾಗಿ 3 ವಿಭಾಗಗಳಾಗಿ ವಿಂಗಡಿಸಿದ್ದು, ಹಿರಿಯರ ವಿಭಾಗ ಪ್ರಥಮ ಬಹುಮಾನ ಮೂರು ಜನ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಶ್ರೀಮತಿ ದೀಪ ಎಸ್.ಬಾಳಿಗಾ, ದಾವಣಗೆರೆಯ ಶ್ರೀಮತಿ ಪ್ರಪುಲ್ಲಾ ಸತ್ಯನಾರಾಯಣ ಕಿಣಿ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಶ್ರೀಮತಿ ಶ್ರದ್ದಾ ದೀಪಕ್ ಸಾವಂತ್ ಈ ಮೂವರು ಪ್ರಥಮ ಬಹುಮಾನ ಪಡೆದಿದ್ದಾರೆ.
ದ್ವಿತೀಯ ಬಹುಮಾನ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತಲ್ಲೂರಿನ ಚಂದ್ರ ಮೋಹನ್ ಆಚಾರ್ಯ, ತೃತೀಯ ಬಹುಮಾನ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬ್ಳೆಯ ಬಾಬು ಚಲುವಾದಿ ಪೂಜಾರಿ, ಸಮಾಧಾನಕರ ಬಹುಮಾನಗಳು ಬಾಗಲಕೋಟೆಯ ಶ್ರೀಮತಿ ನೀಲವೇಣಿ ವೆಂಕಟೇಶ್, ಬಳ್ಳಾರಿಯ ರೂಪಾ ಕೇಶವ ಮಡಿವಾಳರ ಪಡೆದಿರುತ್ತಾರೆ.
ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಿರಿಯರ ವಿಭಾಗ ಎಂದು ಪರಿಗಣಿಸಿದ್ದು ಪ್ರಥಮ ಬಹುಮಾನ ಇಬ್ಬರು ಹಂಚಿಕೊಂಡಿದ್ದು ದಾವಣಗೆರೆಯ ಪ್ರತ್ಯಕ್ಷ ಎಸ್. ಶೆಟ್ಟಿ, ಮೈಸೂರಿನ ಮಿಥುನ್ ಎಸ್., ದ್ವಿತೀಯ ಬಹುಮಾನ ಇಬ್ಬರು ಹಂಚಿಕೊಂಡಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ತಾರಗೋಡದ ಧನು ಹೆಗಡೆ, ಗದುಗಿನ ಸಂಗೀತಾ ಹಾದಿಮನಿ, ತೃತೀಯ ಬಹುಮಾನ ಗದುಗಿನ ವಿನಯ ಎ.ಕಲಬುರ್ಗಿ ಸಮಾಧಾನಕರ ಬಹುಮಾನಗಳನ್ನು ದಾವಣಗೆರೆಯ ಸುಜಯ್ ವಿನೋದ್ ದೇವರಾಜ್, ಪ್ರಮಿತ ಪ್ರಸಾದ್, ಗದುಗಿನ ಸಕ್ಕುಬಾಯಿ ಸಂ.ಹನುಗುಂದ, ಶಂಕ್ರಮ ಗೊಲ್ಲರ ಭಾಗ್ಯ ಹು.ಹೂಗಾರ, ಆಕಾಶ ಲಮಾಣಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ತಾರಗೋಡದ ದಿಶಾ ಆನಂದ ಹೆಗಡೆ ಪಡೆದಿರುತ್ತಾರೆ ಎಂದು ಈ ಚಿತ್ರ ಬರೆಯುವ ಸ್ಪರ್ಧೆಯ ಪ್ರಮಾಣಪತ್ರದ ಪ್ರಾಯೋಜಕರು, ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್ ತಿಳಿಸಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಬಹುಮಾನ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಠದ ಹೊನ್ನನಾಯಕನಹಳ್ಳಿ ಹೆಚ್.ಬಿ.ವಿಷ್ಣುಪ್ರಸಾದ್, ದ್ವಿತೀಯ ಬಹುಮಾನ ಬೆಂಗಳೂರಿನ ನಿಹಾರಿಕಾ ಹೆಚ್.ಎನ್., ತೃತೀಯ ಬಹುಮಾನ ಗದುಗಿನ ರೇಷ್ಮಾ ರಾ. ನಾದಾಫ್, ಸಮಾಧಾನಕರ ಬಹುಮಾನಗಳನ್ನು ಗದುಗಿನ ಝಯನ ಖಾ.ತಹಶೀಲ್ದಾರ, ಹರ್ಷಿಯಾ ಜಿ. ಪಡೆದಿರುತ್ತಾರೆ ಎಂದು ತೀರ್ಪುಗಾರರಲ್ಲಿ ಒಬ್ಬರಾದ ಹಿರಿಯ ಕಲಾವಿದರೂ, ಸಂಸ್ಕಾರ ಭಾರತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎ.ಮಹಲಿಂಗಪ್ಪ ತಿಳಿಸಿದ್ದಾರೆ.
ಈಗಾಗಲೇ ತಿಳಿಸಿದ ಸ್ಪರ್ಧೆಯ ನಿಯಮದಂತೆ ಬಹುಮಾನ ವಿತರಣೆ ಸಮಾರಂಭ ಇರುವುದಿಲ್ಲ. ಸ್ಪರ್ಧಿಗಳು ಸ್ಪರ್ಧಿಗಳು ಕೊಟ್ಟ ಅಂತರಜಾಲ ತಾಣದ ನಂಬರ್ (ವ್ಯಾಟ್ಸಪ್ ನಂಬರ್ಗೆ) ಬಹುಮಾನ ವಿಜೇತರಿಗೆ ಮಾತ್ರ ಫಲಿತಾಂಶ ಪ್ರಮಾಣಪತ್ರ ಕಳಿಸಲಾಗುವುದು ಎಂದು ಕಲಾಕುಂಚ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ತಿಳಿಸಿದ್ದಾರೆ.