ಕಾಂಗ್ರೆಸ್ 3ನೇ ಪಟ್ಟಿ ರಿಲೀಸ್: ಪಟ್ಟಿಯಲ್ಲಿ ಯಾರ್ಯಾರಿದ್ದಾರೆ. . .? ಸಿದ್ಧರಾಮಯ್ಯ ಕೋಲಾರದಿಂದ ಹಿಂದೆ ಸರುದ್ರಾ?

ಶಿವಮೊಗ್ಗ ನಗರಕ್ಕೆ ಎಚ್.ಸಿ. ಯೋಗೇಶ್

ಹೊನ್ನಾಳಿಯಿಂದ ಡಿ.ಜಿ. ಶಾಂತನಗೌಡ

ಶಿಕಾರಿಪುರಕ್ಕೆ ಜಿ.ಬಿ. ಮಾಲತೇಶ್

ಜಗಳೂರಿನಿಂದ ಬಿ.ದೇವೇಂದ್ರಪ್ಪ

ಸುದ್ದಿ360: ಕಾಂಗ್ರೆಸ್ನಿಂದ 3ನೇ ಪಟ್ಟಿ ರಿಲೀಸ್‍ ಆಗಿದ್ದು43 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ.

ಇದರಲ್ಲಿ ಮುಖ್ಯವಾಗಿ ಕೋಲಾರದಿಂದ ಸಿದ್ಧರಾಮಯ್ಯ ಕಣಕಿಳಿಯಲಿದ್ದಾರೆ ಎಂಬ ಮಾತುಗಳಿಗೆ ಈ ಪಟ್ಟಿ ಇತಿಶ್ರೀ ಹಾಡಿದ್ದು, ಕೋಲಾರದಿಂದ ಕೊತ್ತುರ್ ಜಿ. ಮಂಜುನಾಥ್ ಅವರಿಗೆ ಟಿಕೆಟ್ ಲಭಿಸಿದೆ.

ಇನ್ನು ಪಕ್ಷಕ್ಕೆ ಸೇರುವಾಗಿನ ಒಪ್ಪಂದದಂತೆ ಲಕ್ಷ್ಮಣ ಸವದಿಗೆ ಅಥಣಿಯಿಂದ ಟಿಕೆಟ್ ಘೋಷಣೆಯಾಗಿದೆ.

ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವ ಮೂಲಕ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಕೂಡ ಕಾಂಗ್ರೆಸ್ ಮೂರನೇ ಪಟ್ಟಿ ಹುಸಿ ಮಾಡಿದೆ.

ಶಿವಮೊಗ್ಗ ನಗರಕ್ಕೆ ಎಚ್.ಸಿ. ಯೋಗೇಶ್, ಶಿವಮೊಗ್ಗ ಗ್ರಾಮಾಂತರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಡಾ.ಶ್ರೀನಿವಾಸ್ ಕರಿಯಪ್ಪ, ಶಿಕಾರಿಪುರಕ್ಕೆ ಜಿ.ಬಿ. ಮಾಲತೇಶ್, ಹೊನ್ನಾಳಿಯಲ್ಲಿ ಡಿ.ಜಿ. ಶಾಂತನಗೌಡ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಬಿಡುಗಡೆಗೊಳಿಸಿರುವ 3ನೇ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ. . .

  • ಅಥಣಿ – ಲಕ್ಷ್ಮಣ ಸವದಿ
  • ರಾಯ್ಬಾಗ್ ಎಸ್ಸಿ           –           ಮಹವೀರ ಮೋಹಿತ್
  • ಅರಭಾವಿ        –           ಅರವಿಂದ ದಳವಾಯಿ
  • ಬೆಳಗಾಮ್ ಉತ್ತರ        –           ಆಸಿಫ್ ಸೈತ್
  • ಬೆಳಗಾಮ್ ದಕ್ಷಿಣ        –           ಪ್ರಭಾವತಿ ಮಸ್ತ್‍ಮರಡಿ
  • ತೆರದಾಳ್         –           ಸಿದ್ದಪ್ಪ ರಾಮಪ್ಪ ಕೊನ್ನೂರ್
  • ದೇವರ ಹಿಪ್ಪರಗಿ          ಶರಣಪ್ಪ ಟಿ. ಸುಣಗಾರ್
  • ಸಿಂದಗಿ –           ಅಶೋಕ್ ಎಂ. ಮನಗುಳಿ
  • ಗುಲ್ಪರ್ಗ ರೂರಲ್ ಎಸ್ಸಿ           –           ರೇವು ನಾಯ್ಕ್ ಬೆಳಮಾಗಿ
  • ಔರದ್ ಎಸ್ಸಿ     –           ಡಾ. ಶಿಂದೆ ಭೀಮ್‍ಸೇನ್ ರಾವ್
  • ಮಾನ್ವಿ ಎಸ್ಟಿ    –           ಜಿ. ಹಂಪಯ್ಯ ನಾಯಕ್
  • ದೇವದುರ್ಗ  ಎಸ್ಟಿ        ಶ್ರೀದೇವಿ ಆರ್ ನಾಯಕ್
  • ಸಿಂಧನೂರು     ಹಂಪನ್ ಗೌಡ ಬಾದರ್ಲಿ
  • ಶಿರಹಟ್ಟಿ ಎಸ್ಸಿ –           ಸುಜಾತ ಎನ್ ದೊಡ್ಡಮನಿ
  • ನವಲಗುಂದ – ಎನ್ ಹೆಚ್. ಕೊನರೆಡ್ಡಿ
  • ಕುಂದಗೋಳ    ಕುಸುಮಾವತಿ ಸಿ ಶಿವಳ್ಳಿ
  • ಕುಮಟಾ          –           ನಿವೇದಿತ್ ಆಳ್ವ
  • ಶಿರಗುಪ್ಪ ಎಸ್ಟಿ          –           ಬಿ.ಎಂ. ನಾಗರಾಜ್
  • ಬಳ್ಳಾರಿ ಸಿಟಿ     ನರ ಭರತ್ ರೆಡ್ಡಿ
  • ಜಗಳೂರು ಎಸ್ಟಿ           –           ಬಿ. ದೇವೇಂದ್ರಪ್ಪ
  • ಹರಪನಹಳ್ಳಿ   –           ಎನ್. ಕೊಟ್ರೇಶ್
  • ಹೊನ್ನಾಳಿ        –           ಡಿ.ಜಿ. ಶಾಂತನಗೌಡ
  • ಶಿವಮೊಗ್ಗ ರೂರಲ್     – ಡಾ. ಶ್ರೀನಿವಾಸ್ ಕರಿಯಣ್ಣ
  • ಶಿವಮೊಗ್ಗ ನಗರ          –           ಹೆಚ್. ಸಿ. ಯೋಗೇಶ್
  • ಶಿಕಾರಿಪುರ       –           ಜಿ.ಬಿ. ಮಾಲತೇಶ್
  • ಕಾರ್ಕಳ           ಉದಯ್ ಶೆಟ್ಟಿ
  • ಮೂಡಿಗೆರೆ ಎಸ್ಸಿ           –           ನಯನಜ್ಯೋತಿ ಜ್ಹಾವರ್
  • ತರೀಕೆರೆ            –           ಜಿ.ಹೆಚ್. ಶ್ರೀನಿವಾಸ
  • ತುಮಕೂರು ರೂರಲ್   –           ಜಿ.ಹೆಚ್. ಶಣ್ಮುಖಪ್ಪ ಯಾದವ್
  • ಚಿಕ್ಕಬಳ್ಳಾಪುರ –           ಪ್ರದೀಪ್ ಈಶ್ವರ ಅಯ್ಯರ್
  • ಕೋಲಾರ         –           ಕೊತ್ತುರ್ ಜಿ. ಮಂಜುನಾಥ್
  • ದಾಸರಹಳ್ಳಿ     –           ಧನಂಜಯ ಗಂಗಾಧರಯ್ಯ
  • ಚಿಕ್ಕಪೇಟೆ         –           ಆರ್. ವಿ. ದೇವರಾಜು
  • ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸ್ ಗೌಡ
  • ಬೆಂಗಳೂರು ದಕ್ಷಿಣ      –           ಆರ್.ಕೆ. ರಮೇಶ್
  • ಚನ್ನಪಟ್ಟಣ –           ಗಂಗಾಧರ್ ಎಸ್.
  • ಮದ್ದೂರ್        –           ಕೆ. ಎಂ. ಉದಯ್
  • ಅರಸೀಕೆರೆ        –           ಕೆ.ಎಂ. ಶಿವಲಿಂಗೇ ಗೌಡ
  • ಹಾಸನ            –           ಬನವಾಸಿ ರಂಗಸ್ವಾಮಿ
  • ಮಂಗಳೂರು ಸಿಟಿ ದಕ್ಷಿಣ         –           ಜಾನ್ ಕುಮಾರ್ ರೈ
  • ಕೃಷ್ಣರಾಜ       -ಎಂ. ಕೆ. ಸೋಮಶೇಖರ
  • ಚಾಮರಾಜ      –           ಕೆ. ಹರೀಶ್ ಗೌಡ
admin

admin

Leave a Reply

Your email address will not be published. Required fields are marked *

error: Content is protected !!