ಕಾಳಿಕಾದೇವಿಗೆ ಅಪಮಾನ: ಕಾಳೀ ಚಿತ್ರ ತಡೆಗೆ ವಿಶ್ವಕರ್ಮ ಸಮಾಜ ಒತ್ತಾಯ

ಸುದ್ದಿ360, ದಾವಣಗೆರೆ, ಜು.10: ಕಾಳಿ ಚಿತ್ರದ ಪೋಸ್ಟರ್ ನಲ್ಲಿ ಕಾಳಿ ದೇವತೆಯನ್ನು ಧೂಮಪಾನ ಮಾಡುವ ರೀತಿಯಲ್ಲಿ ಬಿಂಬಿಸುವ ಮೂಲಕ ನಮ್ಮ ಕುಲದೇವತೆಗೆ ಘೋರ ಅಪಮಾನ ಎಸಗಲಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಬಿ.ವಿ. ಶಿವಾನಂದ  ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,  ಕಾಳಿ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ಮಿಸಿರುವ ಕಾಳಿ ಚಿತ್ರದ ಈ ಪೋಸ್ಟರ್ನಿಂದ ನಮ್ಮ ವಿಶ್ವಕರ್ಮ ಸಮಾಜದ ಸನಾತನ ಸಂಸ್ಕೃತಿಗೆ ಘನಘೋರ ಅಪಮಾನವಾಗಿದೆ. ಇಂತಹ ಚಿತ್ರ ಬಿಡುಗಡೆಗೆ ಕೇಂದ್ರ ಸರ್ಕಾರ ಅವಕಾಶ ನೀಡಬಾರದು ಎಂದು ಜಿಲ್ಲಾ ವಿಶ್ವಕರ್ಮ ಸಮಾಜ ಒತ್ತಾಯಿಸುವುದಾಗಿ ತಿಳಿಸಿದರು.

ಕಾಳಿಕಾ ದೇವಿಗೆ ಮಾಡಿರುವ ಅಪಮಾನ ಉದ್ದೇಶಪೂರ್ವಕವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ಸಮಾಜದ ಸ್ವಾಸ್ತ್ಯವನ್ನು ಕದಡುವ ಮೂಲಕ ಸಿನಿಮಾ ಪ್ರಮೋಷನ್ ಮಾಡುವ ಗೀಳು ಹೆಚ್ಚಾಗಿದೆ. ಇಂತಹ ಸಮಾಜಘಾತುಕ ಚಿತ್ರಗಳ ನಿರ್ಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಚಿತ್ರ ನಿರ್ಮಾಪಕಿ ಮಣಿಮೇಕಲೈ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ವಿಶ್ವಕರ್ಮ ಪರಿಷತ್ ನಿಂದ  ಸೋಮವಾರ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೂ ಜಿಲ್ಲಾ ವಿಶ್ವಕರ್ಮ ಸಮಾಜಕ್ಕೂ ಯಾವ ಸಂಬಂಧವಿಲ್ಲ.

ಗುರುಗಳು ಮಠಕ್ಕೆ ಸೀಮಿತವಾಗಿರದೆ ಸಮಾಜದ ಗುರುಗಳಾಗುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಅಂತಹ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲವಿದೆ. ಸಮಾಜದಲ್ಲಿ ನಾವು ಎಲ್ಲರೂ ವೃತ್ತಿಪರರು. ನಮ್ಮಲ್ಲಿ ಯಾವುದೇ ಒಡಕು ಇಲ್ಲ ಎಂದು ಸಮಾಜದ ಜಿಲ್ಲಾ ಪ್ರಧಾನ ಕಾರ್ಯದಶರ್ಶಿ ಬಿ. ವಿ. ಶಿವಾನಂದ ಹೇಳಿದರು.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಕೂಡ ಕಾಳಿ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ಸ್ಪಂದಿಸುವ ಗುಣ ಹೊಂದಬೇಕಾದವರು ದೇವತೆಯ್ನು ಅವಮಾನಿಸಿ ದೇವಿಯನ್ನು ವಿಕೃತಗೊಳಿಸಿ ಪೋಸ್ಟರ್ ಹಾಕಿಸುವುದು ಎಷ್ಟು ಸರಿ ಎಂದು ಶಿವಾನಂದ ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಇಂತಹ ಘಟನೆಗಳನ್ನು ಗಮನಿಸಿ ಕ್ರಮ ಜರುಗಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಮಾಜವು ಪ್ರತಿಭಟನೆಯ ಮೂಲಕ ಎಚ್ಚರಿಸಬೇಕಾಗುತ್ತದೆ ಮತ್ತು ಚಿತ್ರ ಪ್ರದರ್ಶನಕ್ಕೆ ಮುಂದಾದಲ್ಲಿ ಪ್ರದರ್ಶನದ ವೇಳೆ ಪ್ರತಿಭಟಿಸಿ ಅಡ್ಡಿಯನ್ನುಂಟು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಬಸಾಪುರದ ನಾಗೇಂದ್ರಚಾರ್, ಜಗನ್ನಾಥಚಾರ್, ಬಿ ಸಿದ್ದಾಚಾರ್, ವಿ.ಎಂ. ಕೊಟ್ರೇಶಾಚಾರ್, ಬೇತೂರು ವಿಜಯಕುಮಾರ್, ಜಿ.ವಿ. ಬ್ರಹ್ಮಾಚಾರ್, ಆಲೂರುಹಟ್ಟಿ ಜಕಣಾಚಾರ್, ಶಂಭುಲಿಂಗ ಕಮ್ಮಾರ್, ಬೇತೂರು ವಿಜಯ್ ಕುಮಾರ್, ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!