ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಅಭಿನಂದನೆಗಳ ಮಹಾಪೂರ
ಸುದ್ದಿ360 ದಾವಣಗೆರೆ, ಜೂ16: ಮೈಸೂರಿನಲ್ಲಿ ಜೂ.೧೧, ೧೨ರಂದು ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ೨ನೇ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಗರದ ಈಗಲ್ ಫಿಟ್ನೆಸ್ ಕೇಂದ್ರದ ವಿದ್ಯಾರ್ಥಿಗಳು 3 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಿಕ್ ಲೈಟ್ ಇವೆಂಟ್‌ನ 7-9 ವರ್ಷದ ವಿಭಾಗದಲ್ಲಿ ಯು. ಅದಿತ್ಯ ಮತ್ತು ಎ.ಬಿ. ಅಧಿತಿ ಹಾಗೂ 11-13 ವರ್ಷದ ವಿಭಾಗದಲ್ಲಿ ಎ.ಬಿ. ಅನುಷ ಚಿನ್ನದ ಪದಕ ಗೆದ್ದಿದ್ದಾರೆ. 7-9 ವರ್ಷ ವಿಭಾಗದಲ್ಲಿ ಕೆ.ವಿ. ನಿಧಿ ಮತ್ತು 11-13 ವರ್ಷ ವಿಭಾಗದಲ್ಲಿ ಎನ್.ವಿ. ಗುಣದೀಪ್, ಲೋ-ಕಿಕ್ ಇವೆಂಟ್‌ನ 13-15 ವರ್ಷ ವಿಭಾಗದಲ್ಲಿ ಆರುಂಧತಿ ಮತ್ತು ಯು. ಆದ್ವಿತಾ ಬೆಳ್ಳಿ ಪದಕ ಗಳಿಸಿದ್ದಾರೆ. ಕಿಕ್‌ಲೈಟ್ 11-13 ವರ್ಷದ ವಿಭಾಗದಲ್ಲಿ ಎನ್. ಚಿರಾಯುಷ್, ಎಸ್.ಎಚ್. ಸಮರ್ಥ ಮತ್ತು ಮಹಾಂತ್ ಶೇಖರ್ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಈಗಲ್ ಫಿಟ್ನೆಸ್ ತರಬೇತುದಾರ ವೆಂಕಿ ಸೆನ್ಸೈ, ವ್ಯವಸ್ಥಾಪಕ ದೀಕ್ಷಿತ್ ಮತ್ತು ಮಲ್ಲಿಕಾರ್ಜುನ್, ಕ್ರೀಡಾ ಪ್ರೋತ್ಸಾಹಕ ಶ್ರೀನಿವಾಸ ದಾಸಕರಿಯಪ್ಪ ಹಾಗೂ ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್ ಅಭಿನಂದಿಸಿದ್ದಾರೆ.