ಗುರು ಅನ್ನದಾನ ಮಹಾಶಿವಯೋಗಿಗಳ ಮತ್ತು ಡಾ. ಅಭಿನವ ಅನ್ನದಾನ ಶ್ರೀಗಳ ಪುಣ್ಯಾರಾಧನೆ – 249ನೇ ಶಿವಾನುಭವ ಸಂಪದ

ಸುದ್ದಿ360 ದಾವಣಗೆರೆ, ಆ.18: ಗುರು ಅನ್ನದಾನ ಮಹಾಶಿವಯೋಗಿಗಳವರ 45ನೇ ಪುಣ್ಯಾರಾಧನೆ ಮತ್ತು ಕಾಯಕಯೋಗಿ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯಾರಾಧನೆಯನ್ನು ಇದೇ ಆಗಸ್ಟ್ 20 ಮತ್ತು 21ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶ್ರೀ ಅನ್ನದಾನೇಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಅಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, 21ರ ಭಾನುವಾರ ಬೆಳಿಗ್ಗೆ 10ಕ್ಕೆ ನಗರದ ಶ್ರೀ ದೇವರಾಜ ಅರಸು ಬಡಾವಣೆಯ ಬಿ ಬ್ಲಾಕ್ ನಲ್ಲಿರುವ ಅನ್ನದಾನೇಶ್ವರ ಶಾಖಾಮಠದಲ್ಲಿ ಉಭಯ ಗುರುಗಳ ಪುಣ್ಯಸ್ಮರಣೆ, 249ನೇ ಶಿವಾನುಭವ ಸಂಪದ ಮತ್ತು 501 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

20ರ ಶನಿವಾರ ಸಂಜೆ 4ಕ್ಕೆ ನೂತನ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಪುರಪ್ರವೇಶ ಕಾರ್ಯಕ್ರಮ ನಡೆಯಲಿದ್ದು, ದೇವರಾಜ ಅರಸು ಬಡಾವಣೆಯ ಲಿಂಗೈಕ್ಯ ಅಥಣಿ ಕೊಟ್ರಪ್ಪ ಮಹಾದ್ವಾರದಿಂದ ಮಠದ ವರೆಗೆ ಕರೆದೊಯ್ಯುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

21ರಂದು ನಡೆಯುವ ಕಾರ್ಯಕ್ರಮದಲ್ಲಿ ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಶ್ರೀಗಳು, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸುವರು. ಅನ್ನದಾನೇಶ್ವರ ಸಮುದಾಯಭವನಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಶಂಕುಸ್ಥಾಪನೆ ನೆರವೇರಿಸುವರು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಶ್ರೀ ಅನ್ನದಾನೇಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಅಧ್ಯಕ್ಷ ಅಥಣಿ ಎಸ್ ವೀರಣ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಜಿಎಂ ಸಿದ್ದೇಶ್ವ‌ರ, ಮಾಜಿ ಶಾಸಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಎ.ಎಂ.ಪ್ರಕಾಶ್ ಅವರಿಗೆ ಕಾಯಕ ಜೀವಿ, ಡಾ.ಮತ್ತಿಹಳ್ಳಿ ಜೆ ಪ್ರಕಾಶ್ ಅವರಿಗೆ ವೈದ್ಯ ಪ್ರವೀಣ ಸೌರಭ, ಎಸ್ ಎಸ್ ಬಿರಾದಾರ್ ಅವರಿಗೆ ಕಾಯಕರತ್ನ, ವೈ. ಬಿ.ಸತೀಶ್ ಅವರಿಗೆ ಸಮಾಜ ಸೇವಾ ಚಿಂತಾಮಣಿ, ಕೆ.ಟಿ. ಮಹಾಲಿಂಗಪ್ಪ ಅವರಿಗೆ ಕಾಯಕ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸುದ್ದಿಗೋಷ್ಠಿಯಲ್ಲಿ ಅಮರಯ್ಯ ಗುರುವಿನಮಠ, ನಾಗರಾಜ್ ಯಲಿಗಾರ್, ವೀರಪ್ಪ ಎಂ ಭಾವಿ, ಶಿವಪುತ್ರಪ್ಪ ಸೂಗಾಡಿ, ಎನ್ ಅಡಿವೆಪ್ಪ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!