ಜಿಎಂಐಟಿಯಲ್ಲಿ ಸಾರಸ್-3D ಯಶಸ್ವಿ ಕಾರ್ಯಗಾರ

ದಾವಣಗೆರೆ: ನಗರದ ಜಿ ಎಮ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಸಾರಸ್-3D ಕಾರ್ಯಗಾರವು ಯಶಸ್ವಿಯಾಗಿ ಪೂರ್ಣಗೊಂಡಿತು. ಸಾರಸ್-3D ಸಂಸ್ಥೆಯು ಹಮ್ಮಿಕೊಂಡಿದ್ದ ಈ ಕಾರ್ಯಗಾರದಲ್ಲಿ ವಿವಿಧ ಸ್ಕೂಲ್ ಮತ್ತು ಕಾಲೇಜಿನ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಾರಸ್-3D ಸಂಸ್ಥೆಯು ರಸಾಯನಶಾಸ್ತ್ರ ಭೌತಶಾಸ್ತ್ರ ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಮೇಲೆ 3D ಮಾಡಲ್‌ಗಳನ್ನು ರಚಿಸಿದ್ದು, ಪ್ರಾಧ್ಯಾಪಕರುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮೂಡಿಬಂದಿವೆ. 6ನೇ ತರಗತಿಯಿಂದ 12ನೇ ತರಗತಿವರೆಗೂ ಈ ನಾಲ್ಕು ವಿಷಯಗಳ ಮೇಲೆ 3D ಮಾಡೆಲ್ ಗಳು ಲಭ್ಯವಿದೆಯೆಂದು ಸಂಸ್ಥೆಯ  ಸಂಸ್ಥಾಪಕರಾದ ಬಿಪಿನ್ ಡಿ ದಾಮ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿಗಳಾದ ಅನಿತ್ ಕುಮಾರ್ ಜಿಎಸ್, ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ, ಕಷ್ಟಕರವಾದ ಅನೇಕ ವಿವಿಧ ವಿಷಯಗಳ ಪರಿಕಲ್ಪನೆಗಳನ್ನು 3D ಮೂಲಕ ಸುಲಲಿತವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ಹಾಗೂ ಕಷ್ಟಕರ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ನಂತರ ನಡೆದ ಕಾರ್ಯಗಾರದಲ್ಲಿ 3D ಕನ್ನಡಕದ ಮೂಲಕ ವಿವಿಧ ವಿಷಯಗಳ ಕಷ್ಟಕರ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಬಿಪಿನ್ ಡಿ ದಾಮ, ಸಂಸ್ಥೆಯ ಮಾರಾಟ ವಿಭಾಗದ ಉಪಾಧ್ಯಕ್ಷರಾದ ಸುನಿಲ್ ಮೋಟ್ವಾನಿ,  ಕರ್ನಾಟಕ  ವಿಭಾಗದ ವ್ಯಾಪಾರ ಅಭಿವೃದ್ಧಿ ಅಧಿಕಾರಿ ಸಂತೋಷ್, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ  ಕಟ್ಟಿಮನಿ ಟಿ ಆರ್, ಜಿ ಎಂ ಎಚ್ ಪಿ ಯು ಪ್ರಾಂಶುಪಾಲರಾದ ಡಾ ಓಂಕಾರಪ್ಪ ಎಚ್ ಎಸ್  ಮತ್ತು ಪ್ರಾಧ್ಯಾಪಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

admin

admin

Leave a Reply

Your email address will not be published. Required fields are marked *

error: Content is protected !!