ಸುದ್ದಿ360 ದಾವಣಗೆರೆ, ಜೂ.23: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಡಿನ ಗಣ್ಯರಿಗೆ ನೀಡುವ 2022ನೇ ಸಾಲಿನ ಎಚ್.ಡಿ. ದೇವೇಗೌಡ ಪ್ರಶಸ್ತಿಗೆ ಜಿಲ್ಲಾ ಸರ್ವೇಕ್ಷಣಾಕಾರಿ ಡಿ.ಜಿ. ರಾಘವನ್ ಭಾಜನರಾಗಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಎಚ್.ಡಿ. ದೇವೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಘವನ್ ಅವರೊಂದಿಗೆ 2020ನೇ ಸಾಲಿನ ಪ್ರಶಸ್ತಿಗೆ ಆಂಧ್ರಪ್ರದೇಶ ಮೂಲದ ಮಂದಕೃಷ್ಣ ಮಾದಿಗ, 2021ನೇ ಸಾಲಿನ ಪ್ರಶಸ್ತಿಗೆ ಜನಪದ ವಿದ್ವಾಂಸ ಯುಗಧರ್ಮ ರಾಮಣ್ಣ ಆಯ್ಕೆಯಾಗಿದ್ದಾರೆ. 2020ರಿಂದ ಕೋವಿಡ್ ಕಾರಣದಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗದ ಕಾರಣ ಎರಡು ವರ್ಷದ ಪ್ರಶಸ್ತಿಗಳನ್ನು ಈ ಬಾರಿ ನೀಡಲು ತೀರ್ಮಾನಿಸಲಾಗಿದೆ. ಇದೇ ಜುಲೈ ಕೊನೆಯ ವಾರದಲ್ಲಿ ದಾವಣಗೆರೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಾರ್ಯಕಾರಿ ಸಭೆಯಲ್ಲಿ ಕಾರ್ಯದರ್ಶಿ ಅನೀಸ್ ಪಾಷ, ಉಪಾಧ್ಯಕ್ಷೆ ಹೊನ್ನಮ್ಮ ದೇವರಬೆಳಕೆರೆ, ವನಜಾಕ್ಷಮ್ಮ ನ್ಯಾಮತಿ, ಎ.ಎಸ್. ಶಿವಲಿಂಗಪ್ಪ ಹೊನ್ನಾಳಿ, ಕೆ.ಆರ್. ತಿಪ್ಪೇಸ್ವಾಮಿ ಜಗಳೂರು, ಬಾಡ ವೀರೇಶ್, ಬಿ. ದಾದಾಪೀರ್, ಎಂ. ಪರಮೇಶ್ವರಪ್ಪ ಹರಪನಹಳ್ಳಿ, ಎಸ್.ಎಚ್. ಪ್ರಕಾಶ್ ಮಳಲ್ಕೆರೆ ಇದ್ದರು.