ಜು.12ಕ್ಕೆ ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ

ಸುದ್ದಿ360, ದಾವಣಗೆರೆ, ಜು.10:  ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ. ಶಿವರಾಜ್ ಕುಮಾರ್ ಅಭಿಮಾನಿ ಸಂಘ ಮತ್ತು ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ  ನಟ ಶಿವರಾಜ್ ಕುಮಾರ್ ರವರ 60ನೇ ಹುಟ್ಟುಹಬ್ಬವನ್ನು ಜು. 12ರಂದು ದಾವಣಗೆರೆಯಲ್ಲಿ ಆಚರಿಸಲಾಗುತ್ತಿರುವುದಾಗಿ ಒಕ್ಕೂಟದ ಜಿಲ್ಲಾಧ್ಯಕ್ಷ ಯೋಗೇಶ್ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,  ಅಂದು ನಗರದ ಜಯದೇವ ವೃತ್ತದಲ್ಲಿ ಬೆಳಿಗ್ಗೆ 11.30ಕ್ಕೆ ನೆಚ್ಚಿನ ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಗುತ್ತಿದ್ದು, ಶ್ರೀ ಬಸವಪ್ರಭು ಸ್ವಾಮೀಜಿ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಈ ಸಮಾರಂಭದಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ತಿಳಿಸಿದರು.

ನಗರದ ಅಶೋಕ ಚಿತ್ರಮಂದಿರದಲ್ಲಿ ಬೈರಾಗಿ ಚಿತ್ರ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು, ಪ್ರದರ್ಶನ ವೇಳೆ ಮಧ್ಯಾಹ್ನ 1 ಗಂಟೆಗೆ ಚಿತ್ರಮಂದಿರಕ್ಕೆ ತೆರಳಿ ಪ್ರೇಕ್ಷಕರಿಗೆ ಸಿಹಿ ಹಂಚುವ ಮೂಲಕ ನೆಚ್ಚನ ನಟನ ಹುಟ್ಟುಹಬ್ಬ ಆಚರಣೆ ಮಾಡುವುದಾಗಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉತ್ತರ ವಲಯದ ಅಧ್ಯಕ್ಷ ಶಿವರತನ್, ಪ್ರಧಾನ ಕಾರ್ಯದರ್ಶಿ ಕೆ.ವೈ. ತಪ್ಪೇಸ್ವಾಮಿ, ಗೌರವ ಅಧ್ಯಕ್ಷ ಬಿ. ವಾಸುದೇವ, ಮಹಿಳಾ ಜಿಲ್ಲಾಧ್ಯಕ್ಷೆ ಭಾಗ್ಯಾದೇವಿ, ಉಪಾಧ್ಯಕ್ಷ ದಾ.ಹ. ಶಿವಕುಮಾರ್, ಜಿ.ಪಿ. ಪ್ರಕಾಶ್, ಜಿ. ಹರೀಶ್ ಇತರರು ಇದ್ದರು.

Leave a Comment

error: Content is protected !!