ಜ. 21 ಮಹಿಳಾ ಸಶಕ್ತೀಕರಣಕ್ಕಾಗಿ ವಿವಿಧ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಸುದ್ದಿ360 ದಾವಣಗೆರೆ ಜ.18: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್‌ ವತಿಯಿಂದ ದಾವಣಗೆರೆಯ ಶಾಮನೂರು ರಸ್ತೆಯ ಬಾಪೂಜಿ ಸಮುದಾಯ ಭವನದಲ್ಲಿ ಜ.21ರಂದು ವಿವಿಧ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಜೀತೋ ಬಿಸಿನೆಸ್ ನೆಟ್‌ವರ್ಕ್‌ನ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ವೇತಾಗಾಂಧಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ ವಸ್ತು ಪ್ರದರ್ಶನದ ಪ್ರಮುಖ ಪ್ರಯೋಜಕರಾಗಿದ್ದು, ಮುಖ್ಯ ಅತಿಥಿಗಳಾಗಿ ಚೇತನಾ ಎಚುಕೇಷನ್ ಟ್ರಸ್ಟ್‌ನ ಮುಖ್ಯಸ್ಮ ಡಾ.ವಿ.ವಿಜಯಲಕ್ಷ್ಮೀ ಆಗಮಿಸುವರು ಎಂದು ಮಾಹಿತಿ ನೀಡಿದರು.

ಮಹಿಳಾ ಸಶಕ್ತೀಕರಣಕ್ಕಾಗಿಯೇ ಆಯೋಜಿಸಿರುವ ಈ ಮಾರಾಟ ಮೇಳ, ಮಹಿಳೆಯರಿಂದ ಮಹಿಳೆಯರಿಗಾಗಿ ಘೋಷ ವಾಕ್ಯದಡಿ ಮಹಿಳಾ ಉದ್ಯಮಿಗಳಿಗಾಗಿಯೇ ರೂಪುಗೊಂಡಿದೆ. ಕಳೆದ ಮೂರು ವರ್ಷದಿಂದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಸಲಾಗುತ್ತಿದೆ. ಮನೆಯಲ್ಲಿ ತಯಾರಿಸಿದ ಹಪ್ಪಳ, ಸಂಡಿಗೆ, ಎಂಬ್ರಾಯ್ಡರಿ, ಆಭರಣಗಳು ಇತರ ವಸ್ತು ಪದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ವರ್ಷ 70ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ವಸ್ತು ಪ್ರದರ್ಶನ  ಏರ್ಪಡಿಸಲಾಗಿದೆ. ನಮ್ಮ ಸಂಸ್ಥೆಯಡಿ ನಡೆದ ಪುದರ್ಶನ ಮತ್ತು ಮಾರಾಟ ಮೇಳದಿಂದ ಪ್ರಭಾವಿತಗೊಂಡ ಅನೇಕ ಮಹಿಳೆಯರು ಸ್ವತಂತ್ರ ವಾಗಿ ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆ ನಡೆಸುವಂತಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಅಜಿತ್ ಓಸ್ವಾಲ್, ವಿಕ್ರಂ ಸೇಠಿಯಾ, ಬಿಂದು, ವಿರಾಜ್ ಜೈನ್ ಇತರರು ಇದ್ದರು.

Leave a Comment

error: Content is protected !!