ಸುದ್ದಿ360, ದಾವಣಗೆರೆ, ಏ.18: ಬೆಂಗಳೂರಿನ ಟೊಯೋಟಾ ಇಂಡಿಯಾ ಆಟೋ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿ ದಾವಣಗೆರೆ ಜಿಎಂಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ 10 ವಿದ್ಯಾರ್ಥಿಗಳು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಏ. 17ರಂದು ನಡೆದ ಸಂದರ್ಶನ ಪ್ರಕ್ರಿಯೆಯಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸಂದರ್ಶನ ಸುತ್ತುಗಳಲ್ಲಿ ತಮ್ಮ ಕೌಶಲ್ಯತೆಯನ್ನು ಪ್ರದರ್ಶಿಸಿ ಅಂತಿಮವಾಗಿ ಹತ್ತು ವಿದ್ಯಾರ್ಥಿಗಳು ಆಯ್ಕೆಯಾದರು ಎಂದು ತಿಳಿಸಲಾಗಿದೆ.
ಆಯ್ಕೆಯಾದ ವಿದ್ಯಾರ್ಥಿಗಳಾದ ಮೆಹಬೂಬ್ ಖಾನ್, ಯಶ್ವಂತ್ ಕುಮಾರ್ ಜಿ ಎನ್, ಶಾಜಿದ್ ಪಿ, ಸಂಜಯ್ ಜೆ, ಶಿವಕುಮಾರ್ ಎ ಎಸ್, ವಜ್ರದತ್ತ ಜಾದವ್ ಎಸ್, ಸಂದೇಶ್ ಮಹೇಶ್ ಪಾಟೀಲ್, ಶಾಹಿದ್ ಆಫ್ರಿದಿ ಎಂ, ಶಿವಾಜಿ ರಾವ್ ಶಿಂಧೆ ಕೆ ಮತ್ತು ಸಂತೋಷ್ ಪಿ ಸಿಹಿ ಹಂಚುವುದರ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಜಿಎಂ ಲಿಂಗರಾಜು, ಆಡಳಿತಾಧಿಕಾರಿ ವೈ ಯೂ ಸುಭಾಷ್ ಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ ಶ್ರೀನಿವಾಸ್ ಸಿ ವಿ, ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕರು ಮತ್ತು ಪ್ಲೇಸ್ಮೆಂಟ್ ಸಂಯೋಜಕರು ಆದ ಪ್ರಶಾಂತ್ ಎಚ್ಆರ್ ಹಾಗೂ ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.