ಡಿ.ಕೆ.ಸಹೋದರರ ಆಪ್ತ ಇಕ್ಬಾಲ್ ಹುಸೇನ್‌ಗೆ ಇಡಿ ನೋಟಿಸ್‍

ಸುದ್ದಿ360, ರಾಮನಗರ, ಜೂ.24: ಅಕ್ರಮ ಹಣ ವರ್ಗಾವಣೆ ಸಂಬಂಧ ’ಕಾಂಗ್ರೆಸ್ ಮುಖಂಡರೂ ಆದ ಡಿ.ಕೆ.ಸಹೋದರರ ಆಪ್ತ ಇಕ್ಬಾಲ್ ಹುಸೇನ್‌ಗೆ ಗುರುವಾರ ಸಂಜೆ ಇ-ಮೇಲ್‍ ಮೂಲಕ ಇಡಿ ನೋಟಿಸ್ ನೀಡಿದೆ. ಸೋಮವಾರ ಖುದ್ದು ಕಚೇರಿಗೆ ಆಗಮಿಸುವಂತೆ ಸೂಚನೆ ನೀಡಿದೆ.

ನೋಟಿಸ್ ಪಡೆದ ಕೂಡಲೇ ದೆಹಲಿಗೆ ಹೋಗಿರುವ ಇಕ್ಬಾಲ್ ಹಿರಿಯ ನಾಯಕರ ಬೇಟಿಯ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.

ಇರುವ ಮೂರು ದಿನದಲ್ಲಿ ಎಲ್ಲ ದಾಖಲೆಗಳ ಸಂಗ್ರಹ ಕಷ್ಟವಾಗುತ್ತದೆ ಎಂದು ಮೇಲ್ ಕಳುಹಿಸಿ ದೆಹಲಿಗೆ ಬಂದಿದ್ದೆನೆ. ವಿಮಾನ ಇಳಿಯುವ ಮುನ್ನವೇ ಮೇಲ್ ರಿಜಿಕ್ಟ್ ಮಾಡಿದ್ದಾರೆ. ನಾನು ಪ್ರಮಾಣಿಕವಾಗಿ ವ್ಯವಹಾರ ಮಾಡುತ್ತಿದ್ದೆನೆ. ಯಾವುದೇ ಅಕ್ರಮ ಮಾಡಿಲ್ಲ. ಅದೇನು ಆಗೊತ್ತೊ ನೋಡೊಣ. ನಾನು ಪ್ರಮಾಣಿಕವಾಗಿದ್ದೆನೆ. ವಿಚಾರಣೆಗೆ ಹಾಜರಾಗುತ್ತೆನೆ ಎನ್ನುತ್ತಾರೆ ಇಕ್ಬಾಲ್ ಹುಸೇನ್.

ವರ್ಷದ ಹಿಂದೆ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾಳಿಗೆ 3 ಕೋಟಿ ಹಣ ನೀಡಿದ್ದ ಪ್ರಕರಣಕ್ಕೆ ಸಂಬಂಸಿದಂತೆ ಇಕ್ಬಾಲ್ ಹುಸೇನ್ ರಿಗೆ ಇಡಿ ನೋಟಿಸ್ ನೀಡಿತ್ತು. ಅನಾರೋಗ್ಯದ ಸಮಸ್ಯೆಯಿಂದಾಗಿ ಕಳೆದ ಬಾರಿ ಇಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಆದರೀಗಾ, ಅಕ್ರಮ ಹಣ ವಹಿವಾಟು ಸಂಬಂಧ‘ನೋಟಿಸ್ ಪಡೆದಿದ್ದಾರೆ. ಡಿ.ಕೆ.ಸಹೋದರರಿಗೆ ಆತ್ಮೀಯರಾಗಿರುವ ಇಕ್ಬಾಲ್, ಅವರ ವ್ಯವಹಾರಗಳಲ್ಲಿಯು ‘ಭಾಗಿಯಾಗಿದ್ದರು. ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ 2018ರಲ್ಲಿ ಸ್ಪರ್ಧಿಸಿದ್ದರು.

ಹೀಗಾಗಿಯೇ ಡಿಕೆಶಿ ಮೇಲಿನ ಅಕ್ರಮ ಹಣ ವರ್ಗಾವಣೆ ಆರೋಪ ಈಗ ಇಕ್ಬಾಲ್ ಅವರ ಕುತ್ತಿಗೆಗೂ ಸುತ್ತಿಕೊಂಡಿದೆ.

admin

admin

Leave a Reply

Your email address will not be published. Required fields are marked *

error: Content is protected !!