ದಾವಣಗೆರೆಯಲ್ಲಿ ಜೈನ ಶ್ರೀ ಸಂಕೇಶ್ವರ ಪಾರ್ಶ್ವ ರಾಜೇಂದ್ರ ದರ್ಶನ ಪಡೆದ ರಾಜ್ಯಪಾಲರು

ದಾವಣಗೆರೆ ಫೆ. 28: ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ನಗರದಲ್ಲಿರುವ ಶ್ರೀ ಶಂಕೇಶ್ವರ ಪಾರ್ಶ್ವ ರಾಜೇಂದ್ರ ಸ್ವಾಮಿ ದರ್ಶನ ಪಡೆದರು.

ದೇವಸ್ಥಾನದ ಆಡಳಿತ ಮಂಡಳಿ ರಾಜ್ಯಪಾಲರಿಗೆ ಸ್ವಾಗತ ಕೋರಿದರು. ಗೌರವಾನ್ವಿತ ರಾಜ್ಯಪಾಲರು ಅವರು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಜೈನ ದೇವಾಲಯದ ಆಡಳಿತ ಮಂಡಳಿ ವತಿಯಿಂದ ರಾಜ್ಯಪಾಲರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷರಾದ ಪೂನಂ ಚಂದ್ರ ಜಿ, ಕಾರ್ಯದರ್ಶಿಗಳಾದ ಮಹಾವೀರ್ ಜೈನ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Comment

error: Content is protected !!