ದಾವಣಗೆರೆಯಲ್ಲಿ ಯುವಾಬ್ರಿಗೇಡ್ ನಿಂದ ಕನ್ನಡ ತೇರಿನ ಯಶಸ್ವಿ ನಗರ ಸಂಚಾರ

ಸುದ್ದಿ360, ದಾವಣಗೆರೆ, ಜು.16: ಸ್ವರಾಜ್ಯಕ್ಕೆ 75 ರ ಸಂಭ್ರಮಕ್ಕಾಗಿ ಯುವಾಬ್ರಿಗೇಡ್ ಆಯೋಜಿಸಿರುವ ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡ ತೇರು ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಸಂಚಾಲಕ ಕೆ.ಎಸ್. ಗಜೇಂದ್ರ  ಶನಿವಾರ ಬೆಳಿಗ್ಗೆ 8 ಗಂಟೆಗೆ  ನಗರ ದೇವತೆ ಶ್ರೀ ದುರ್ಗಾಂಬಿಕ ದೇವಸ್ಥಾನ ಸನ್ನಿಧಿಯಲ್ಲಿ ತೇರಿಗೆ ಪೂಜೆ ಸಲ್ಲಿಸಿ ನಗರ ಸಂಚಾರಕ್ಕೆ ಚಾಲನೆ ನೀಡಿದರು.

ತದನಂತರ ನಗರ ಮಟ್ಟದ ಶಾಲಾ ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ನೀಡಿ,   ಎಲ್ಇಡಿ ಟಿವಿ ಮೂಲಕ 13 ನಿಮಿಷದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.

ಜು.16ರ ಶನಿವಾರದಂದು ಮೋತಿ ವೀರಪ್ಪ ಕಾಲೇಜು, ಅಥಣಿ ಕಾಲೇಜು, BSC ಕಾಲೇಜು, ಮೈಯೂರ ಗ್ಲೋಬಲ್ ಶಾಲೆ,  ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಮೂಲಕ ಸಂಚಾರ ನಡೆಸಿದ ಕನ್ನಡ ತೇರು ಸುಮಾರು 7500 ವಿದ್ಯಾರ್ಥಿಗಳಿಗೆ ರಾಷ್ಟ್ರದ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನದ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿತು ಎಂದು ಯುವಾಬ್ರಿಗೇಡ್ ಜಿಲ್ಲಾ ಸಂಚಾಲಕ ಗಜೇಂದ್ರ ತಿಳಿಸಿದ್ದಾರೆ.

Leave a Comment

error: Content is protected !!