ದಾವಣಗೆರೆ ಎಂಸಿಸಿ ಬಿ ಬ್ಲಾಕ್ ನಲ್ಲಿ ವೋಟರ್ ಐಡಿ – ಆಧಾರ್ ಕಾರ್ಡ್ ಸಂಖ್ಯೆಗಳ ಜೋಡಣೆ ಶಿಬಿರ ಇಂದು

ಸುದ್ದಿ360 ದಾವಣಗೆರೆ ಆ. 22: ನಗರದ ಎಂಸಿಸಿ ಬಿ ಬ್ಲಾಕ್‌ನ ನಾಗರಿಕರ ಅನುಕೂಲಕ್ಕಾಗಿ ಆ. 22ರಂದು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಸಂಖ್ಯೆಗಳ ಜೋಡಣಾ ಶಿಬಿರ ಆಯೋಜಿಸಲಾಗಿದೆ.

ಜಿ. ಎಸ್. ಮಂಜುನಾಥ್

ಬೆಳಿಗ್ಗೆ10 ಗಂಟೆಯಿಂದ ಇಲ್ಲಿನ ಐಎಂಎ ಹಾಲ್ ನಲ್ಲಿ ಶಿಬಿರ ನಡೆಯಲಿದೆ. ಸಾರ್ವಜನಿಕರು ತಮ್ಮ ಚುನಾವಣಾ ಗುರುತಿನ ಚೀಟಿಗೆ (ವೋಟರ್ ಐಡಿ) ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಅತ್ಯಗತ್ಯ. ಆದ ಕಾರಣ ಶಿಬಿರ ಆಯೋಜಿಸಲಾಗಿದೆ.  ಜನರು ಈ ಶಿಬಿರಕ್ಕೆ ಬರುವಾಗ ತಮ್ಮ ವೋಟರ್ ಐ.ಡಿ., ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಇರುವ ಮೊಬೈಲ್ ಅನ್ನು ತರಬೇಕು. 38ನೇ ವಾರ್ಡ್ ನ ನಾಗರಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ದಾವಣಗೆರೆ ಮಹಾನಗರ ಪಾಲಿಕೆಯ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರು ಮನವಿ ಮಾಡಿದ್ದಾರೆ.

Leave a Comment

error: Content is protected !!