ದಾವಣಗೆರೆ ತಾಲ್ಲೂಕು ಬಿಸಿಯೂಟ ತಯಾರಕರಿಂದ ಪ್ರತಿಭಟನೆ (ಜೂ.29)

ಸುದ್ದಿ360 ದಾವಣಗೆರೆ, ಜೂ.28: ತಾಲ್ಲೂಕು ಬಿಸಿಯೂಟ ತಯಾರಕರಿಂದ ಜೂ.29ರಂದು ದಾವಣಗೆರೆ ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾಧ್ಯಕ್ಷ ಕಾಂ.ಆವರಗೆರೆ ಚಂದ್ರು ತಿಳಿಸಿದ್ದಾರೆ.

ಬಿಸಿಯೂಟ ತಯಾರಕರಿಗೆ ಇಡುಗಂಟು ಹಣ, ನಿವೃತ್ತಿ ವೇತನ ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ತಹಸೀಲ್ದಾರ್ ರವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ದಾವಣಗೆರೆ ತಾಲ್ಲೂಕಿನ ಎಲ್ಲಾ ಬಿಸಿಯೂಟ ತಯಾರಕರು ಬುಧವಾರ ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ತಹಸೀಲ್ದಾರ್ ರವರ ಕಚೇರಿ ಬಳಿ ಆಗಮಿಸಬೇಕೆಂದು ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಕಾಂ.ಮಳಲ್ಕೆರೆ ಜಯಮ್ಮ, ಪ್ರಧಾನ ಕಾರ್ಯದರ್ಶಿ ಕಾಂ ಜ್ಯೋತಿಲಕ್ಷ್ಮಿ, ಖಜಾಂಚಿ ಕಾಂ ಪದ್ಮಾ ಹಾಗು ಇತರೆ ಪದಾಧಿಕಾರಿಗಳು ಪ್ರಕಟಣೆ ಮೂಲಕ ಕೋರಿದ್ದಾರೆ.

Leave a Comment

error: Content is protected !!