ದಾವಣಗೆರೆ ಮಾ:28: ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತನ ಪತ್ನಿ ಮತ್ತು ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಮಾ23ರಂದು ದಾಖಲಾಗಿದ್ದ ಈ ಪ್ರಕರಣವನ್ನು ಬೇಧಿಸಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಡಿ.ಸಿ.ಆರ್.ಬಿ ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ್ ಎಸ್ ಇವರ ಮಾರ್ಗದರ್ಶನದಲ್ಲಿ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಪೊಲೀಸ್ ಠಾಣೆ, ನೇತೃತ್ವದಲ್ಲಿ ಡಿ.ಸಿ.ಆರ್.ಬಿ ವಿಭಾಗದ ಸಿಬ್ಬಂದಿ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಮೃತ ವ್ಯಕ್ತಿಯ ಬೆರಳು ಮುದ್ರೆಯ ಸಹಾಯದಿಂದ ಮೃತನ ಹೆಸರು ವಿಳಾಸ ಪತ್ತೆಯಾಗಿದ್ದು. ಮೃತ ವ್ಯಕ್ತಿ ಹಾವೇರಿ ಜಿಲ್ಲೆ, ಹಾನಗಲ್ ತಾಲ್ಲೂಕ್ ಬೈಚವಳ್ಳಿ ಗ್ರಾಮದ ವಾಸಿ ಮಹಾಂತೇಶ್ ಪುಟ್ಟಪ್ಪ ಚೌರದ (36) ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ದಾವಣಗೆರೆಯ ಹಗೇದಿಬ್ಬಾ ಸರ್ಕಲ್ ಹತ್ತಿರ ಬುದ್ಧ ಬಸವ ನಗರ ವಾಸಿಯಾದ ಮೃತನ ಹೆಂಡತಿ ಶ್ವೇತಾ (28) ಹಾಗೂ ಅವಳ ಪ್ರಿಯಕರ ಬುದ್ಧ ಬಸವ ನಗರ ವಾಸಿ ಚಂದ್ರಶೇಖರ್ ಅಲಿಯಾಸ್ ಚಂದ್ರ (26) ಇವರನ್ನು ಪತ್ತೆ ಮಾಡಿ ಬಂಧಿಸಿಲಾಗಿದೆ.
ಆರೋಪಿತನಿಂದ ಕೊಲೆ ಮಾಡಲು ಬಳಿಸಿದ ಸುಮಾರು ಒಂದು ಲಕ್ಷ ಬೆಲೆ ಬಾಳು 2 ದ್ವಿ-ಚಕ್ರ ವಾಹನ, 2 ಮೊಬೈಲ್ ಪೋನ್, ಒಂದು ಚಾಕು, ಬೀಯರ್ ಬಾಟಲ್‌ಗಳು, ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಪ್ರಕರಣವನ್ನು ಬೇಧಿಸುವಲ್ಲಿ ತನಿಖಾಧಿಕಾರಿಯಾದ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಠಾಣೆ, ರೇಣುಕಾ ಜಿ.ಎಂ ಪಿ.ಎಸ್.ಐ, ಎಂ.ಎಸ್ ದೊಡ್ಡಮನಿ ಪಿ.ಎಸ್.ಐ ವಿದ್ಯಾನಗರ ಪೊಲೀಸ್ ಠಾಣೆ, ಮಂಜುನಾಥ ಕಲ್ಲದೇವರು ಪಿ.ಎಸ್.ಐ ಎಫ್.ಪಿ.ಬಿ ದಾವಣಗೆರೆ ಹಾಗೂ ಡಿ.ಸಿ.ಆರ್.ಬಿ ವಿಭಾಗದ ಸಿಬ್ಬಂದಿಗಳಾದ ಆಂಜನೇಯ, ಮಜೀದ್, ಸುರೇಶ್, ರಾಘವೇಂದ್ರ, ಮಾರುತಿ, ರಮೇಶ್ ನಾಯ್ಕ, ನಟರಾಜ್, ಅಶೋಕ್, ಮಲ್ಲಿಕಾರ್ಜುನ, ಬಾಲಾಜಿ, ಹಾಗೂ ವಿದ್ಯಾನಗರದ ಎ.ಎಸ್.ಐ ನಾಗರಾಜ್, ರಾಜಪ್ಪ ಮಡಿವಾಳರ್, ಗೋಪಿನಾಥ ನಾಯ್ಕ, ಯೋಗೀಶ್ ನಾಯ್ಕ, ಮಂಜುನಾಥ ಬಿ.ವಿ, ಗುಡ್ಡಪ್ಪ, ಬಸವರಾಜ್, ಕನ್ನಪ್ಪ, ನಾಗರಾಜ ಕೂಲೇರ, ರೋಜಾ, ಸರಸ್ವತಿ ಮತ್ತು ಎಫ್.ಪಿ.ಬಿ ಘಟಕದ ಸಿಬ್ಬಂದಿಗಳಾದ ಅಕ್ತರ್, ನಾಗರಾಜ ಕುಂಬಾರ, ಮಾರುತಿ, ವಿರೇಶ್, ಚಾಲಕರಾದ ರಾಮಚಂದ್ರಪ್ಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯಾದ ರಾಘವೇಂದ್ರ, ಶಾಂತರಾಜ್ ರವರನ್ನು ಮಾನ್ಯ ಪೊಲೀಸ್ ಅಧೀಕ್ಷಕರವರಾದ ಸಿ.ಬಿ ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಆರ್.ಬಿ ಬಸರಗಿ ರವರು ಶ್ಲಾಘಿಸಿರುತ್ತಾರೆ.