ದಾವಣಗೆರೆ ಹಳೇ ಪೇಟೆಯ ಶತಮಾನದ ಶಾಲೆಯಲ್ಲಿ ಯೋಗ ದಿನಾಚರಣೆ

ಸುದ್ದಿ360 ದಾವಣಗೆರೆ ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದಾವಣಗೆರೆಯ ಹಳೇ ಪೇಟೆಯ ಶತಮಾನದ ಶಾಲೆ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.

ಯೋಗ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು, ಯೋಗ ಕಾರ್ಯಕ್ರಮಕ್ಕೆ  ದೈಹಿಕ ಶಿಕ್ಷಕಿ ಸುಜಾತ ಮತ್ತು ಇಂಗ್ಲಿಷ್ ಶಿಕ್ಷಕಿ ನಮಿತಾ ಎಂ.ಎನ್. ಮಾರ್ಗದರ್ಶನ ನೀಡಿದರು,  6ನೇ ತರಗತಿ ವಿದ್ಯಾರ್ಥಿ ಆರ್. ಪೃಥ್ವಿ ದಾಸರ್ ಮತ್ತು ಇತರೆ ವಿದ್ಯಾರ್ಥಿಗಳು ಗಿಡಕ್ಕೆ ನೀರೆರೆಯುವ ಮೂಲಕ  ಯೋಗ ದಿನಾಚರಣೆ ಕಾರ್ಯಕ್ರಮ  ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಿ.ಆರ್.ಪಿ. ಶೋಭ, ಸಿ.ಆರ್.ಪಿ. ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಎಂ.ಶೋಭ, ಶಾಲೆಯ ಎಸ್.ಡಿ.ಎಂ.ಸಿ ಅದ್ಯಕ್ಷರಾದ ಕೋಡಬಾಳ್ ಚನ್ನಬಸಪ್ಪ, ದಾವಣಗೆರೆ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ದಾವಣಗೆರೆ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ ದಾಸರ್, ಇಂಗ್ಲಿಷ್ ಶಿಕ್ಷಕಿ ನಮಿತಾ, ಎಂ.ಎನ್.ಮತ್ತು ಶಿಕ್ಷಕಿಯರಾದ ಮಮತ ಡಿ.ಜಿ. ವಿಜಯಕುಮಾರಿ, ಸಂಪತ್‍ಕುಮಾರಿ, ಕಲ್ಪನ, ಸುಜಾತ ಜಯಶ್ರೀ ಮತ್ತು ಪೋಷಕರು ಇದ್ದರು.

Leave a Comment

error: Content is protected !!