ಸುದ್ದಿ360 ದಾವಣಗೆರೆ ಮಾ.15: ನಗರದ ಹೊರ ವಲಯ ಬಾಡಾ ಕ್ರಾಸ್ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಮಾ.12ರಂದು ಬೆಳಗಿನ ಜಾವ ನಡೆದಿದ್ದ ದರೋಡೆ ಪ್ರಕರಣದ ದೂರಿನ ಮೇರೆಗೆ ತನಿಖೆ ನಡೆಸಿರುವ ಪೊಲೀಸರು 5 ಜನ ಆರೋಪಿತರನ್ನು ಪತ್ತೆ ಹಚ್ಚಿ ಸ್ವತ್ತು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾ.12ರಂದು ಬೆಳಗಿನ ಜಾವ 12.30 ಗಂಟೆಯಿಂದ 01.30 ಗಂಟೆ ಸಮಯದಲ್ಲಿ ದಾವಣಗೆರೆ ಬಾಡಾ ಕ್ರಾಸ್ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಯಾರೋ 06 ಜನ ಅಪರಿಚಿತರು ಹಲ್ಲೆ ಮಾಡಿ, ಮೊಬೈಲ್ ಪೋನ್, ಎ.ಟಿ.ಎಂ ಕಾರ್ಡ್‌ಗಳು ಮತ್ತು ಸ್ಕೂಟರ್ ಕಿತ್ತುಕೊಂಡು ಹೋಗಿರುವುದಾಗಿ ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಷಣ್ಮುಖ ಎಂಬುವರು ದೂರು ದಾಖಲಿಸಿದ್ದರು.
ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಇವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್‌ಪೆಕ್ಟರ್ ವಿದ್ಯಾನಗರ ಪೊಲೀಸ್ ಠಾಣೆ, ಶಶಿಧರ್ ಯು.ಜೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಟಿ.ಜೆ ನಗರ ಪೊಲೀಸ್ ಠಾಣೆ, ಎಂ.ಎಸ್ ದೊಡ್ಡಮನಿ ಪಿ.ಎಸ್.ಐ. ರೇಣುಕಾ ಜಿ.ಎಂ ಪಿ.ಎಸ್.ಐ ವಿದ್ಯಾನಗರ ಠಾಣೆ ಹಾಗೂ ವಿದ್ಯಾನಗರ ಠಾಣೆಯ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ಮಾ.14ರಂದು ರಾಘವೇಂದ್ರ.ಎಸ್ ಅಲಿಯಾಸ್ ರಾಜಾಹುಲಿ / ರಾಘು, ಮಲ್ಲಶೆಟ್ಟಹಳ್ಳಿ ಗ್ರಾಮ, ಜಿ.ಎಂ ಕ್ಯಾಂಪ್ ವಾಸಿ ಹನುಮಂತ ಅಲಿಯಾಸ್ ಬೆಟ್ಟ, ಮನು ಅಲಿಯಾಸ್ ಗುಂಡ – ಹೊನ್ನೂರು ಗ್ರಾಮ, ಪ್ರಮೋದ್ ಅಲಿಯಾಸ್ ಕುಂಟ- ಅವರಗೆರೆ ಹಾಗೂ ನಿಟುವಳ್ಳಿ ವಾಸಿ ಕಸ್ತೂರಿ ಎಂಬುವರನ್ನು ಪತ್ತೆ ಮಾಡಿ ಆರೋಪಿತರಿಂದ ದರೋಡೆ ಮಾಡಿದ್ದ ಅಂದಾಜು 60,000/-ರೂ ಬೆಲೆ ಬಾಳುವ ಯಮಹಾ ಸ್ಕೂಟರ್, 10,000/-ರೂ ಬೆಲೆ ಬಾಳುವ ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದ 50,000/-ರೂ ಬೆಲೆ ಬಾಳುವ ಹೊಂಡಾ ಯುನಿಕಾರ್ನ ಬೈಕ್ ಮತ್ತು 2,00,000/-ರೂ ಬೆಲೆ ಬಾಳುವ ಮಹೀಂದ್ರ ಆಟೋ ವಶಪಡಿಸಿಕೊಂಡಿದ್ದು, ತಲೆಮರಿಸಿಕೊಂಡಿರುವ ಉಳಿದ ಆರೋಪಿತರ ಪತ್ತೆಕಾರ್ಯ ಪ್ರಗತಿಯಲ್ಲಿರುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.
ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿದ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್‌ಪೆಕ್ಟರ್ ವಿದ್ಯಾನಗರ ಠಾಣೆ, ಶಶಿಧರ್, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಟಿ.ಜೆ ನಗರ ಪೊಲೀಸ್ ಠಾಣಿ, ಎಂ.ಎಸ್ ದೊಡ್ಡಮನಿ ಪಿ.ಎಸ್.ಐ ರೇಣುಕಾ ಜಿ.ಎಂ ಪಿ.ಎಸ್.ಐ ವಿದ್ಯಾನಗರ ಪೊಲೀಸ್ ಠಾಣಿ, ತಿಪ್ಪೇಸ್ವಾಮಿ ಎ.ಎಸ್.ಐ ವಿದ್ಯಾನಗರ ಪೊಲೀಸ್ ಠಾಣಿ ಹಾಗೂ ಸಿಬ್ಬಂದಿಗಳಾದ ಆನಂದ ಮುಂದಲಮನಿ, ಗೋಪಿನಾಥ ನಾಯ್ಕ, ಮಂಜಪ್ಪ , ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಮಂಜುನಾಥ, ರವಿನಾಯ್ಕ, ಬಸವರಾಜ, ರೋಜಾ, ಚಾಲಕರಾದ ಮಂಜುನಾಥ, ರಾಮಚಂದ್ರಪ್ಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯಾದ ರಾಘವೇಂದ್ರ ಮತ್ತು ಪೊಲೀಸ್ ಸಿ.ಸಿ.ಟಿವಿ ಕಮಾಂಡ್ ಸೆಂಟರ್ ಸಿಬ್ಬಂದಿ ರವರಿಗೆ ಪೊಲೀಸ್ ಅಧೀಕ್ಷಕರವರಾದ ಸಿ.ಬಿ. ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಆರ್.ಬಿ ಬಸರಗಿ ರವರು ಶ್ಲಾಘಿಸಿರುತ್ತಾರೆ.