ನಿಷ್ಪಕ್ಷಪಾತ ತನಿಖೆಯಿಂದ ವ್ಯವಸ್ಥೆ ಸ್ವಚ್ಛಗೊಳಿಸಲು ಬದ್ಧ: ಸಿಎಂ ಬೊಮ್ಮಾಯಿ

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಗರಣದ ಕೂಗು ಕೇಳಿಬಂದಿದ್ದರೂ, ಯಾವುದೇ ತನಿಖೆ ನಡೆಯಲಿಲ್ಲ

ಸುದ್ದಿ360 ಬೆಂಗಳೂರು ಜು.4: ನಿಷ್ಪಕ್ಷಪಾತವಾದ  ಹಾಗೂ ನಿರ್ದಾಕ್ಷಿಣ್ಯವಾದ ತನಿಖೆಯನ್ನ ಮಾಡುವ ಮೂಲಕ ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಬ್ಬನ್ ಪಾರ್ಕ್‍ನ ಸರ್ಕಾರಿ ಮತ್ಸ್ಯಾಲಯದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಪಿಎಸ್ ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಯವರಿಗೆ ಮುಕ್ತವಾದ ಅವಕಾಶ ನೀಡಲಾಗಿದೆ. ಸಾಕ್ಷ್ಯ ಆಧಾರಗಳ ಮೇಲೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎಷ್ಟೇ ದೊಡ್ಡ ಅಧಿಕಾರಿಗಳಾಗಿದ್ದರೂ ನಮ್ಮ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಗರಣದ ಕೂಗು ಕೇಳಿಬಂದಿದ್ದರೂ, ಯಾವುದೇ ತನಿಖೆ ನಡೆದಿರಲಿಲ್ಲ ಎಂದು ತಿಳಿಸಿದರು.

Leave a Comment

error: Content is protected !!