ಸುದ್ದಿ360,ದಾವಣಗೆರೆ,ಜು.05: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ಲೋಪದಿಂದ ರಾಜ್ಯದ ವಿದ್ಯಾರ್ಥಿಗಳ ಮೇಲೆ ಅಗಾಧ ಪರಿಣಾಮ ಬೀರಿದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದ ರಾಜ್ಯ ಬಿಜೆಪಿ ಸರ್ಕಾರ ಪ್ರತಿಯೊಂದು ಹಂತದ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಎನ್.ಎಸ್.ಯು.ಐ ಘಟಕ ಮಂಗಳವಾರ ಜನಜಾಗೃತಿ ರ‍್ಯಾಲಿ ನಡೆಸಿತು.
ಮೂರು ನೂರು ಅಡಿಗಳ ತಿರಂಗದೊಂದಿಗೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ನಗರದ ಎವಿಕೆ ಕಾಲೇಜು ಸಮೀಪದಿಂದ ಆರಂಭಗೊಂಡ ರ‍್ಯಾಲಿ ಬಿ.ಎಸ್.ಚನ್ನಬಸಪ್ಪ ಅಂಗಡಿಯ ಮುಂಭಾಗದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಮೂಲಕ ಸಾಗಿ ಜಯದೇವ ವೃತ್ತ ತಲುಪಿತು.
ಸರ್ಕಾರ ಶಾಲಾ ಕಾಲೇಜು ಶಿಕ್ಷಣವನ್ನು ಕೇಸರಿಮಯ ಮಾಡಲು ಹೋರಟಿದೆ ಎಂಬ ಫಲಕಗಳೊಂದಿಗೆ ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ರ‍್ಯಾಲಿಯಲ್ಲಿ ಎನ್ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿಗಣೇಶ್, ಸಂಚಾಲಕರಾದ ಫಹಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಯ್, ಅಲಿ ರಹಮತ್ ಪೈಲ್ವಾನ್, ಗಿರೀಶ್ ಸತ್ತಾಲ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಉಪಾಧ್ಯಕ್ಷ ಸಾಗರ್ ಎಲ್ ಹೆಚ್, ಸೇವಾದಳ ರಾಜ್ಯ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಸುಹೇಲ್, ಹರೀಶ್, ತಾಹಿರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು.