ಪತ್ನಿಯ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ ಪತಿ

ಸುದ್ದಿ360 ಶಿವಮೊಗ್ಗ, ಸೆ.07: ಗಂಡ ಹೆಂಡತಿಯ ನಡುವಿನ ಜಗಳದಿಂದಾಗಿ ಹೆಂಡತಿ ರಕ್ತದಮಡುವಿನಲ್ಲಿ ಕೊನೆಯುಸಿರೆಳೆದರೆ, ಪತಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿರುವ ಘಟನೆ ಶಿವಮೊಗ್ಗ ನಗರದಲ್ಲಿ ವರದಿಯಾಗಿದೆ.

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಗರದ ಪ್ರಿಯಾಂಕ ಲೇ ಔಟ್ ನಲ್ಲಿನ ಮನೆಯೊಂದರಲ್ಲಿನ ಅಡುಗೆ ಮನೆಯ ರಕ್ತದ ಮಡುವಿನಲ್ಲಿ ಪತ್ನಿ ಪತ್ತೆಯಾಗಿದ್ದಾಳೆ. ಮೃತ ಮಹಿಳೆಯನ್ನ ಮಂಜುಳ (30) ಎಂದು ಗುರುತಿಸಲಾಗಿದೆ.
ಪತಿ ದಿನೇಶ್ ಮೆಸ್ಕಾಂ ಉದ್ಯೋಗಿ ಎನ್ನಲಾಗಿದ್ದು, ಆತ ಸಹ ಕೈಕೊಯ್ದುಕೊಂಡಿದ್ದಾನೆ. ಆತನಿಗೆ ನಾರಾಯಣ ಹೃದಯಾಲಯಕ್ಕೆ ದಾಖ ಲಿಸಲಾಗಿದೆ.

ನಿನ್ನೆ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಿಯಾಂಕ ಲೇಔಟ್ ನ ಮನೆಯಲ್ಲಿ ದಿನೇಶ್ ಮತ್ತು ಮಂಜುಳಾರ ನಡುವೆ ಗಲಾಟೆಯಾಗಿದ್ದು ಈ ಗಲಾಟೆಯೇ ಕೊಲೆಗೆ ಕಾರಣವಾಗಿದೆ ಎಂದು ಪತಿ ದಿನೇಶ್ ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ.

ಕೊಲೆಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸ್ ಇಲಾಖೆಯ ತನಿಖೆಯಿಂದ ತಿಳಿಯಬೇಕಿದೆ. ಮಂಜುಳ 12 ವರ್ಷಗಳ ವರೆಗೆ ದಿನೇಶ್ ನೊಂದಿಗೆ ಸಂಸಾರ ನಡೆಸಿದ್ದಾರೆ. ಮತ್ತಿಘಟ್ಟ ಮೂಲದ ಮಂಜುಳಾ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಸ್ಥಳಕ್ಕೆ ತುಂಗಾ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Comment

error: Content is protected !!