ಸುದ್ದಿ360 ದಾವಣಗೆರೆ, ಜೂ16: ಮೈಸೂರಿನಲ್ಲಿ ಜೂ.10ರಿಂದ 12ರವರೆಗೆ ನಡೆದ ರಾಜ್ಯ ಮಟ್ಟದ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಾವಣಗೆರೆಯ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿ ವಿ. ರಕ್ಷಿತ್ ಚಿನ್ನದ ಪದಕ ಮತ್ತು ರಕ್ಷಿತ್ ತಂದೆ, ಶ್ರೀ ಬೀರೇಶ್ವರ ವ್ಯಾಯಾಮ ಶಾಲೆ ಕ್ರೀಡಾಪಟು ಪಿ. ವಿಶ್ವನಾಥ್ ಕಂಚಿನ ಪದಕಕ್ಕೆ ಭಾಜನರಾಗುವ ಮೂಲಕ ತಂದೆ-ಮಗ ಇಬ್ಬರೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ಹೈದರಾಬಾದ್ನಲ್ಲಿ ಜು.೫ರಿಂದ ೧೦ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ತಂದೆ ಮತ್ತು ಮಗ ಒಂದೇ ಕ್ರೀಡಾಕೂಟದಲ್ಲಿ ಭಾಗವಹಿಸಿ ಇಬ್ಬರೂ ಪದಕ ಗೆದ್ದಿರುವುದು ವಿಶೇಷವಾಗಿದೆ. ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ, ಮಾಜಿ ಮೇಯರ್ ಬಿ.ಜಿ. ಅಜಯ್ಕುಮಾರ್, ಶಶಿ ಸೋಪ್ ಸಂಸ್ಥೆ ಮಾಲೀಕ ಡಾ. ರವಿ ಇಳಂಗೋ, ಬಿ. ವೀರಣ್ಣ, ಪಾಲಿಕೆ ಸದಸ್ಯರಾದ ಬಿ.ಎಚ್. ವಿನಾಯಕ ಪೈಲ್ವಾನ್, ಜೆ.ಎನ್. ಶ್ರೀನಿವಾಸ್, ಶ್ವೇತಾ ಶ್ರೀನಿವಾಸ್, ಪಿಎಸ್ಐ ಎಚ್. ದಾದಾಪೀರ್ ಇತರರು ರಕ್ಷಿತ್ ಮತ್ತು ವಿಶ್ವನಾಥ್ರನ್ನು ಅಭಿನಂದಿಸಿದ್ದಾರೆ.
Related Posts
ಶಿವಮೊಗ್ಗ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಶಟಲ್ ಗಾಗಿ ಮೀಸಲಾಯಿತೇ. . .?
ಇತರೆ ಕ್ರೀಡೆಗಳೆಡೆ ಮಹಾನಗರ ಪಾಲಿಕೆ, ಜಿಲ್ಲಾಡಳಿತದ ಧೋರಣೆಯಾದರೂ ಏನು..? ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ಹಾಗೂ ಕ್ರೀಡಾಪಟುಗಳಿಂದ ಪ್ರತಿಭಟನೆ ಸುದ್ದಿ360 ಶಿವಮೊಗ್ಗ, ಸೆ. 18: ಶಿವಮೊಗ್ಗ ನಗರದಲ್ಲಿರುವ…
ಕರ್ನಾಟಕ ಸ್ಟೇಟ್ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್- ಸೌಜನ್ಯಗೆ ದ್ವಿತೀಯ ಸ್ಥಾನ
ಸುದ್ದಿ360, ದಾವಣಗೆರೆ ಸೆ.12: ಇಂದು ಕಣ್ಣೂರು ಸ್ಪೋರ್ಟ್ಸ್ ಅಕಾಡೆಮಿ ರಾಣೇಬೆನ್ನೂರ ನಲ್ಲಿ ಏರ್ಪಡಿಸಲಾಗಿದ್ಧ ಕರ್ನಾಟಕ ಸ್ಟೇಟ್ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಪಂದ್ಯಾವಳಿಯಲ್ಲಿ ಸೌಜನ್ಯ ವೈ ಎಮ್…
ಸಾಮಾಜಿಕ ಜಾಲತಾಣದಲ್ಲಿ ಹೈವೋಲ್ಟೇಜ್ ಕ್ರಿಕೆಟ್ ಸಾಂಗ್ ‘ಗೆದ್ದು ಬಾ ಓ ಇಂಡಿಯಾ’
ಸುದ್ದಿ360 ದಾವಣಗೆರೆ, ಅ. 11: ವರ್ಲ್ಡ್ ಕಪ್ ಕ್ರಿಕೆಟ್ ಕಾವೇರುತ್ತಿರುವ ಈ ಹೊತ್ತಿನಲ್ಲಿ ದಾವಣಗೆರೆಯ ಸೃಜನಶೀಲ ತಂಡ “ಬ್ಲ್ಯಾಕ್ ಕ್ಯಾಟ್ ಕ್ರಿಯೇಟಿವ್ ಲ್ಯಾಬ್” ರಚಿಸಿರುವ “ವರ್ಲ್ಡ್ ಕಪ್…