ಶಿವಮೊಗ್ಗ: ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹಾಯಕ ಗ್ರಂಥಪಾಲಕರಾದ ಪ್ರಭಾಕರ. ಎಸ್. ಇವರಿಗೆ ಪಿಎಚ್ಡಿ ಪದವಿ ಲಭಿಸಿದೆ.
ತಮಿಳುನಾಡಿನ ಕೊಯಮತ್ತೂರಿನ ಭಾರತೀಯಾರ್ ವಿಶ್ವವಿದ್ಯಾಲಯವು “Use of electronic services by students and faculty members in medical institutions libraries of Karnataka” (ಕರ್ನಾಟಕದಲ್ಲಿ ವೈದ್ಯಕೀಯ ಸಂಸ್ಥೆಗಳ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ಎಲೆಕ್ಟ್ರಾನಿಕ್ ಸೇವೆಗಳ ಬಳಕೆ) ಎಂಬ ಸಂಶೋಧನಾ ಗ್ರಂಥಕ್ಕೆ ಪಿಎಚ್ಡಿ ಪದವಿ ಪ್ರದಾನ ಮಾಡಿದೆ. ಇವರಿಗೆ ಚಿಕ್ಕಮಗಳೂರಿನ ಎಸ್.ಟಿ.ಜೆ. ಮಹಿಳಾ ಕಾಲೇಜಿನ ಗ್ರಂಥಪಾಲಕರಾಗಿದ್ದ ಡಾ.ಎಫ್.ಜಿ. ಪಾಟೀಲ ರವರು ಮಾರ್ಗದರ್ಶಕರಾಗಿದ್ದರು.