ಬಿದ್ದ ಮರಕ್ಕೆ ಬೈಕ್ ಡಿಕ್ಕಿ- ಬೈಕ್‌ ಸವಾರ  ಸ್ಥಳದಲ್ಲೆ ಸಾವು

ಸುದ್ದಿ360 ಬೆಳ್ತಂಗಡಿ, ಜೂ.15 : ಬೆಳಗ್ಗಿನ ಜಾವ ರಸ್ತೆಗೆ ಅಡ್ಡವಾಗಿ ಮರ ಬಿದ್ದಿದ್ದು ಇದನ್ನು ಗಮನಿಸದ ಬೈಕ್ ಸವಾರ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯ ಅಡ್ಯಾಲ ಚಡವು ಎಂಬಲ್ಲಿ ಬೆಳಗಿನ ಜಾವ ಸುಮಾರು 5.30ರ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಬೈಕ್ ಸವಾರ ಕನ್ಯಾಡಿ ಬಳಿ ಇರುವ ಹೊಟೇಲ್ ಮಾಲಿಕ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಮುಗುಳಿಚತ್ರ ನಿವಾಸಿ ನೇಮಿರಾಜ್ ಬುಣ್ಣು ಅವರ ಮಗ ವಸಂತ್ ಕುಮಾರ್ ಜೈನ್ (42) ಎಂದು ತಿಳಿದುಬಂದಿದೆ. ವಸಂತ ಕುಮಾರ್ ಜೈನ್ ಅವರು ಈ ಹಿಂದೆ ಧರ್ಮಸ್ಥಳ ಕ್ಷೇತ್ರದಲ್ಲಿ ಕೆಲಸದಲ್ಲಿದ್ದು ನಂತರ ಕೆಲಸಮಯದ ಹಿಂದೆ ಕನ್ಯಾಡಿ ಬಳಿ ಸ್ವಂತ ಹೊಟೇಲ್ ಉದ್ಯಮ ಆರಂಭಿಸಿದ್ದರು.

ಅಪಾಘಾತದಿಂದ ಸಾವನ್ನಪ್ಪಿದ್ದ ಬಗ್ಗೆ ವಾಹನ ಸವಾರರು 112 ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಬಂದು ಬೆಳ್ತಂಗಡಿ ಸಂಚಾರಿ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿ ನಂತರ ಪೊಲೀಸರು ಮಹಜರು ನಡೆಸಿ ಆಂಬುಲೆನ್ಸ್ ತರಿಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Leave a Comment

error: Content is protected !!