ಬಿಸಿಯೂಟ ತಯಾರಕರ ವೇತನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಯಾಗುವವರೆಗೆ ಸುಮ್ಮನೇ ಕೂರುವ ಮಾತೇ ಇಲ್ಲ: ಕಾಂ. ದೇವದಾಸ್

ಸುದ್ದಿ360, ಮೈಸೂರು: ಗ್ಯಾರಂಟಿ ಭರವಸೆ ನೀಡಿದರೂ ಸುಮ್ಮನೆ ಕೂರುವ ಹಾಗಿಲ್ಲ  ಹೋರಾಟ ಅನಿವಾರ್ಯ ಎಂಬುದಾಗಿ ಮೈಸೂರು ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಕಾಂ. ದೇವದಾಸ್ ಹೇಳಿದರು.

ಶನಿವಾರ ಮೈಸೂರಿನ ಎಐಟಿಯುಸಿ ಕಚೇರಿಯಲ್ಲಿ ನಡೆದ ಬಿಸಿಊಟ ತಯಾರಕರ ರಾಜ್ಯ ಸಮಿತಿ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ 6000ರೂಪಾಯಿ ವೇತನ ನೀಡುವುದಾಗಿ ಆರನೇ ಗ್ಯಾರಂಟಿಯ ಭರವಸೆ ನೀಡಿತ್ತು, ಕಾಂಗ್ರೆಸ್ ಪಕ್ಷ ಈಗ ರಾಜ್ಯದಲ್ಲಿ ಅಧಿಕಾರದಲ್ಲಿದೆ ಆದರೆ ಬಿಸಿಯೂಟ ತಯಾರಕರಿಗೆ 6ನೇ ಗ್ಯಾರಂಟಿಯಾಗಿ ಭರವಸೆ ನೀಡಿದಂತೆ ಬರುವ ಜುಲೈ 7 ನೇ ತಾರೀಖು ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸುವ ಬಜೆಟ್ ನಲ್ಲಿ ಬಿಸಿಊಟ ತಯಾರಕರಿಗೆ ವೇತನ ಹೆಚ್ಚಿಸಿ ಜಾರಿ ಮಾಡುತ್ತಾರೆಂದು ಬಿಸಿ ಊಟ ತಯಾರಕರು ನಂಬಿ ಕೂರುವ ಹಾಗಿಲ್ಲ ಎಂದರು.

ಎಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷರಾದ ಎಚ್ ಎಚ್ ಆರ್ ಶೇಷಾದ್ರಿ ಅವರು ಮಾತನಾಡಿ ಬಿಸಿಊಟ ತಯಾರಕರು ಸೇರಿದಂತೆ ಎಲ್ಲಾ ವಲಯದ ಅಸಂಘಟಿತ ಕಾರ್ಮಿಕರು ಕನಿಷ್ಠ ವೇತನ ಜಾರಿಯಾಗುವವರೆಗೂ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಬೇಕೆಂದು ಕರೆಕೊಟ್ಟರು.

ಸಂಘಟನೆಯ ರಾಜ್ಯ ಅಧ್ಯಕ್ಷರಾದ ಕಾಂ ಹೊನ್ನಪ್ಪ ಮರೆಮ್ಮನವರ್ ಸಭೆ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ರಾಜ್ಯ ಖಜಾಂಚಿ ಕಾಂ ರುದ್ರಮ್ಮ ಬೆಳಲಗೆರೆ, ಮೈಸೂರು ಜಿಲ್ಲೆ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಾಂ ಸೋಮರಾಜೆ ಅರಸ್, ಮೈಸೂರು ಜಿಲ್ಲಾ ಬಿಸಿಊಟ ಸಂಚಾಲಕರಾದ ಕಾಂ ಶಿವಣ್ಣ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು. ಬಿಸಿ ಊಟ ತಯಾರಕರ ಫೆಡರೇಶನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ,ಕಾಂ ಆವರಗೆರೆ ಚಂದ್ರು ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು, ಉದ್ಘಾಟನಾ ಕಾರ್ಯಕ್ರಮದ ಕೊನೆಯಲ್ಲಿ ಬಿಸಿಯೂಟ ತಯಾರಕರ ಸಂಘಟನೆಯ ರಾಜ್ಯ ಸಂಚಾಲಕರಾದ ಕಾಂ ಜಿ ಡಿ ಪೂಜಾರ್ ಎಲ್ಲರಿಗೂ ವಂದಿಸಿದರು. ನಂತರ ರಾಜ್ಯ ಸಮಿತಿ ಸದಸ್ಯರ ಸಭೆ ಮುಂದುವರೆಯಿತು.

admin

admin

Leave a Reply

Your email address will not be published. Required fields are marked *

error: Content is protected !!