ಸುದ್ದಿ360 ದಾವಣಗೆರೆ, ಆ. 10: ಇದೇ ಆಗಸ್ಟ್ 13, 14 ಮತ್ತು 15ರಂದು ಭಾರತ ದೇಶ ಸ್ವತಂತ್ರ ಪಡೆದು 75 ವರ್ಷಗಳು ತುಂಬುತ್ತಿರುವ ಈ ಶುಭ ಸಂದರ್ಭದಲ್ಲಿ ದೇಶದ ಅಮೃತ ಮಹೋತ್ಸವದ ಸಂಕೇತವಾಗಿ ದಿನಾಂಕ: 13ರ ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 15 ರ ಸಂಜೆ 6:00 ಗಂಟೆವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಿಸುವಂತಹ ಅವಕಾಶವನ್ನು ಪ್ರತಿಯೊಬ್ಬರಿಗೂ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಪಿಸಿಕೊಟ್ಟವೆ. ಇದು ದೇಶ ಅಭಿಮಾನದ ಪ್ರಶ್ನೆ ಅಷ್ಟೇ ಅಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ – ಬಲಿದಾನ ಮಾಡಿದವರನ್ನು ಸ್ಮರಿಸುವಂತಹ ಕೆಲಸವನ್ನು ಪ್ರತಿಯೊಬ್ಬ ಭಾರತೀಯನು ಮಾಡಬೇಕಾಗಿದೆ. ಇದಕ್ಕಾಗಿ ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ದಿನಾಂಕ 10.08.2022ರ ಬುಧವಾರ ಸಾಯಂಕಾಲ 5:00 ಗಂಟೆ ಯಿಂದ ಆಸಕ್ತರು ರಾಷ್ಟ್ರಧ್ವಜವನ್ನು ದರ 22-00 ರೂಪಾಯಿ ಗಳನ್ನು ಸಂದಾಯ ಮಾಡಿ ಪಡೆಯಬಹುದೆಂದು ಪತ್ರಿಕಾ ಪ್ರಕಟಣೆಯ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನಂತಿಸಿದೆ. ದೇಶ ಅಭಿಮಾನದ ಧ್ವಜ ಆರೋಹಣ ಅಭಿಯಾನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ, ಬಿ. ವಾಮದೇವಪ್ಪ ಅವರು ಅಭಿಮಾನ ಪೂರ್ವಕವಾಗಿ ಜಿಲ್ಲೆಯ ಸಮಸ್ತ ದೇಶಾಭಿಮಾನಿಗಳಲ್ಲಿ ವಿನಂತಿಸಿ ಕೊಂಡಿದ್ದಾರೆ.
Related Posts
ಆಸರೆಯಾದ ಅಜ್ಜಿಯ ನಿವೃತ್ತಿಯ ದಿನದಂದೆ ಹಾಲಮ್ಮನ ಕೊರಳಿಗೆ 5 ಸ್ವರ್ಣ ಪದಕ
ಸುದ್ದಿ360 ದಾವಣಗೆರೆ.ಫೆ.28: ತಾನು 3ನೇ ತರಗತಿಯಲ್ಲಿ ಓದುತ್ತಿರುವಾಗಲೇ ತನ್ನ ಅಮ್ಮನನ್ನು ಕಳೆದುಕೊಂಡು ಅಜ್ಜಿಯ ಆಸರೆಯಲ್ಲಿ ಬೆಳೆದ ಹಾಲಮ್ಮ ಬಿ. ಇಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ…
ದಾವಣಗೆರೆ: ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಕಿರಿಕಿರಿ- ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್ ಸ್ಥಳಕ್ಕೆ ಭೇಟಿ
ತ್ವರಿತ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಮೇಯರ್ ಸೂಚನೆ ಸುದ್ದಿ360 ದಾವಣಗೆರೆ: ನಗರದ ಕೆಲವೆಡೆ ನಡೆಯುತ್ತಿರುವ ನಿರ್ಮಾಣ ಕಾಮಗಾರಿ(construction) ಗಳು ಶೀಘ್ರಗತಿಯಲ್ಲಿ ಸಾಗುತ್ತಿಲ್ಲ ಮತ್ತು ಇದರಿಂದ ಪಾದಚಾರಿಗಳು, ವಾಹನ ಸವಾರರು…
‘ಭವತಾರಿಣಿ’ಯಿಂದ ‘ದೇವವನ’ -1000 ಗಿಡ ನೆಡುವ ಮಾದರಿ ಕಾರ್ಯಕ್ರಮ
ಸುದ್ದಿ360, ದಾವಣಗೆರೆ, ಜು.15: ನಗರದ ಐಟಿಐ ಕಾಲೇಜಿನ ಆವರಣದಲ್ಲಿ ಭವತಾರಿಣಿ ಸಂಸ್ಥೆಯು ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ “ದೇವವನ” ಎಂಬ ವಿನೂತನ ಮಾದರಿ ಕಾರ್ಯಕ್ರಮ ಜರುಗಿತು. 1000 ಗಿಡಗಳನ್ನು…