ಸುದ್ದಿ360 ಬಾಗಲಕೋಟೆ : ಮಹಿಳೆಯರಿಗೆ ಉಚಿತ ಪ್ರಯಾಣ ಅಂತಾರೆ ಹಾಗಾದ್ರೆ ನಮ್ಮಂತವರ ಗೋಳು ಕೇಳೋರ್ಯಾರು ?
ಈ ಕೂಗು ಕೇಳಿ ಬಂದದ್ದು ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ.
ನಮ್ಮ ಲಗೇಜ್ ಹಾಕಿದ್ರೆ ನಡುದಾರಿಯಲ್ಲಿ ತೆಗೆದು ಹಾಕ್ತಿವಿ ಅಂತ ಕಂಡಕ್ಟರ್ ಹೇಳ್ತಾರೆ ಎಂಬುದು ಮಹಿಳೆಯ ಆರೋಪ. ಇಳಕಲ್ ದಿಂದ ಮುದಗಲ್ ಕಡೆಗೆ ತೆರಳುತ್ತಿದ್ದ ಬಸ್ನಲ್ಲಿ ಲಗೇಜ್ ವಿಚಾರದಲ್ಲಿ ಸಾರಿಗೆ ಸಿಬ್ಬಂದಿ, ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದು ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ.
ವ್ಯಾಪಾರಕ್ಕೆಂದು ಪ್ಲಾಸ್ಟಿಕ್ ವಸ್ತುಗಳ ಲಗೇಜ್ ತಂದಿದ್ದ ಮಹಿಳೆಯರು. ಮತ್ತು ಸಾರಿಗೆ ಸಿಬ್ಬಂದಿ ಮಧ್ಯೆ ಈ ವಾಗ್ಯುದ್ದ ನಡೆದಿದೆ.
ಸೀಟ್ ಮೇಲೆ ಹೆಚ್ಚುವರಿ ಲಗೇಜ್ ಇರಿಸಿದ್ದ ಮಹಿಳೆಯರ ಕುರಿತು ಬಸ್ ನಲ್ಲಿ ಎಲ್ಲ ಲಗೇಜ್ ಹಾಕೋದಾದರೆ ಬಸ್ ಸೀಟ್ ಮೇಲೆ ಇಡಬೇಕಾಗುತ್ತೆ, ಇತರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ . ಲಗೇಜ್ ಬಸ್ ಮೇಲೆ ಹಾಕಿ ಇಲ್ಲವೆ ಸೀಟ್ ಬಿಟ್ಟು ಇರಿಸಿ ಎಂದು ಹೇಳಿದ್ದಕ್ಕೆ ಮಹಿಳೆಯರ ಕೂಗಾಟ ನಡೆದಿದೆ.
ನಿನ್ನೆಯವರೆಗೆ ಸುಮ್ಮನಿದ್ದು ಈಗ್ಯಾಕೆ ಹೀಗೆ ಮಾಡ್ತಿದಿರಿ ಎಂಬುದು ಮಾರಾಟದ ವಸ್ತುಗಳ ಲಗೇಜ್ ಹೊಂದಿದ್ದ ಮಹಿಳೆಯ ಪ್ರಶ್ನೆ.
ಆರ್ಡಿನರಿ ಬಸ್ ನಲ್ಲಿ ಹಿಂದುಗಡೆ ಸೀಟ್ ಇರೋದಿಲ್ಲ, ಅಲ್ಲಿ ಹಾಕಿ ಲಗೇಜ್ ಕೊಂಡೊಯ್ಯಿರಿ ಎಂದು ಕಂಡಕ್ಟರ್ ಮಹಿಳೆಗೆ ಸಲಹೆ ನೀಡಿದ್ದಾರೆ. ಇದಕ್ಕೆ ಒಪ್ಪದ ಮಹಿಳೆಯರು ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.