ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಾಗನೂರು ಬಸಪ್ಪ ಕಾಲೇಜು ವಿದ್ಯಾರ್ಥಿಗಳನ್ನು ನಿರ್ದೇಶಕ ಡಾ.ಜಿ.ಎನ್.ಎಚ್. ಕುಮಾರ್, ಪ್ರಾಚಾರ್ಯ ಡಾ.ಎಸ್. ಪ್ರಸಾದ್ ಬಂಗೇರಾ ಅಭಿನಂದಿಸಿದರು.
ಸುದ್ದಿ360 ದಾವಣಗೆರೆ, ಜೂನ್ 18: ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.96 ಫಲಿತಾಂಶ ಪಡೆದಿದ್ದು, ಜಿ.ಡಿ. ರಕ್ಷಿತ 592 ಅಂಕ ಪಡೆದು ರಾಜ್ಯಕ್ಕೆ 6ನೇ ರ್ಯಾಂಕ್ ಹಾಗೂ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 216 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 69 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 116 ವಿದ್ಯಾರ್ಥಿಗಳು ಪ್ರಥಮ ದರ್ಜೆ ಫಲಿತಾಂಶ ಪಡೆದಿದ್ದುಘಿ, 47 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ.
ಜೆ.ಕೆ. ಶ್ರೇಯಸ್ 586(ಶೇ.97.67), ಎಸ್.ಎಚ್. ಶುಭಶ್ರೀ 583 (ಶೇ.97.17), ಬಿ.ಎಲ್. ಯಶವಂತ್ 581(ಶೇ.96.83)ಅಂಕ ಪಡೆದಿದ್ದಾರೆ. ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೆ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಶರಣ ಸಂಗಮೇಶ್ವರ ಗೌಡ, ನಿರ್ದೇಶಕ ಡಾ.ಜಿ.ಎನ್.ಎಚ್. ಕುಮಾರ್, ಪ್ರಾಚಾರ್ಯ ಡಾ.ಎಸ್. ಪ್ರಸಾದ್ ಬಂಗೇರಾ, ಉಪನ್ಯಾಸಕರು ಮತ್ತು ಕಾಲೇಜು ಸಿಬ್ಬಂದಿ ಅಭಿನಂದಿಸಿದ್ದಾರೆ.