ಮಾಯಕೊಂಡ ಬಿಜೆಪಿ ಟಿಕೆಟ್ ಆಕಾಂಕ್ಷಿತರ ಒಗ್ಗಟ್ಟಿನ ಬಂಡಾಯ

ಆರ್. ಎಲ್. ಶಿವಪ್ರಕಾಶ್‍ ಬಂಡಾಯ ಅಭ್ಯರ್ಥಿ

ಸುದ್ದಿ360 ದಾವಣಗೆರೆ, ಏ.14 : ಬಿಜೆಪಿಯಲ್ಲಿನ ಬಂಡಾಯದ ಬಿಸಿ ಮಾಯಕೊಂಡ ಕ್ಷೇತ್ರದಲ್ಲೂ ಕಾಣಿಸಿಕೊಂಡಿದ್ದು, ಬಸವರಾಜ್ ನಾಯ್ಕ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸುತ್ತಿದ್ದಂತೆ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ.

ಮಾಯಕೊಂಡ ಮೀಸಲು ಕ್ಷೇತ್ರದ ಮೂಲ ಬಿಜೆಪಿಯ 11 ಜನ ಟಿಕೆಟ್ ಆಕಾಂಕ್ಷಿತರು ಒಟ್ಟಾಗಿ ಆರ್. ಎಲ್. ಶಿವಪ್ರಕಾಶ್‍ರನ್ನು ಕಣಕ್ಕಿಳಿಸಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ.

ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಹೆಚ್.ಕೆ. ಬಸವರಾಜ್, ಹಾಲಿ ಶಾಸಕರು ಮತ್ತು ಮಾಜಿ ಶಾಸಕರುಗಳಿಗೆ ಟಿಕೆಟ್‍ ನೀಡದೆ ಹೊಸಬರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದ ವರಿಷ್ಠರು ಈಗ ಪಕ್ಷವನ್ನು ಅವಹೇಳನ ಮಾಡಿದ್ದ ಮತ್ತು ಅವಕಾಶವಾದಿ ರಾಜಕಾರಣ ಮಾಡಿಕೊಂಡು ಬಂದಿರುವ ಬಸವರಾಜ್ ನಾಯ್ಕ್ ಅವರಿಗೆ ಟಿಕೇಟ್ ನೀಡಿದೆ. ಇದರಿಂದ ಅಸಮಧಾನಗೊಂಡಿರುವ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಆರ್ ಎಲ್ ಶಿವಪ್ರಕಾಶ್‍ರನ್ನು ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿಸಿ ಚುನಾವಣೆಯಲ್ಲಿ ಗೆಲ್ಲಿಸಿ ಮತ್ತೆ ಬಿಜೆಪಿಯಲ್ಲಿ ಮುಂದುವರೆಯುವ ನಿರ್ಣಯ ತೆಗೆದುಕೊಂಡಿದ್ದೇವೆ ಎಂದರು.

ನಮ್ಮ ಈ ಬಂಡಾಯ ಮಾಯಕೊಂಡ ಕ್ಷೇತ್ರಕ್ಕೆ ಮಾತ್ರವೇ ಇದ್ದು, ಉಳಿದಂತೆ ಬೇರೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರದಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.

ನಾವು ಕ್ಷೇತ್ರದಲ್ಲಿ 11 ಜನ ಟಿಕೆಟ್ ಆಕಾಂಕ್ಷಿಗಳಿದ್ದೇವೆ. ಇನ್ನೂ ಕಾಲಾವಕಾಶವಿದ್ದು, ಬಿ ಫಾರಂ ನೀಡುವ ವೇಳೆಗಾದರೂ ನಿಷ್ಠೆಯಿಂದ ಕೆಲಸ ಮಾಡಿರುವುದನ್ನು ಪರಿಗಣಿಸಿ ನಮ್ಮಲ್ಲೇ ಯಾರೊಬ್ಬರಿಗೆ ಟಿಕೆಟ್ ನೀಡಿದರೂ ಬಂಡಾಯವನ್ನು ಹಿಂಪಡೆಯುತ್ತೇವೆ ಮತ್ತು ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಒಂದಾಗಿ ದುಡಿಯುವುದಾಗಿ ಆಕಾಂಕ್ಷಿತರು ತಿಳಿಸಿದರು.

ಮಾಯಕೊಂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿತರ ಪಟ್ಟಿ

  • ಜಿ. ಮಂಜಾನಾಯ್ಕ, ಬಿಜಪಿ ಜಿಲ್ಲಾ ಉಪಾಧ್ಯಕ್ಷ
  • ಹೆಚ್. ಕೆ. ಬಸವರಾಜ್, ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ
  • ಶಿವಪ್ರಕಾಶ್ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ
  • ಎನ್ ಹನುಮಂತನಾಯ್ಕ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ
  • ಬಿ. ರಮೇಶನಾಯ್ಕ ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ
  • ಮೋಹನ್ ಕುಮಾರ್ ಬಿಜೆಪಿ ಮುಖಂಡ
  • ಆಲೂರು ನಿಂಗರಾಜ್, ತಾ. ಪಂ. ಸದಸ್ಯ ಮಾಜಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ
  • ಬಿ. ಟಿ. ಸಿದ್ದಪ್ಪ ಬಿಜೆಪಿ ಮುಖಂಡ
  • ಶಿವಾನಂದ, ದಾವಣಗೆರೆ ಮಹಾನಗರಪಾಲಿಕೆ ಎಸ್ಸಿ ಮೋರ್ಚಾ ಕಾರ್ಯದರ್ಶಿ
  • ಅನಿಲ್‍ಕುಮಾರ್ ಎಸ್ಸಿ ಮೋರ್ಚಾ ಖಜಾಂಚಿ
  • ಕೊಡಗನೂರು ವೆಂಕಟೇಶ್, ದಿಶಾ ಸಮಿತಿ ಸದಸ್ಯ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಪಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್. ಹನುಮಂತನಾಯ್ಕ, ರಮೇಶ್ ನಾಯ್ಕ, ಆಲೂರು ನಿಂಗರಾಜ್, ಬಿಜೆಪಿ ಮುಖಂಡರಾದ  ಗಂಗಾಧರ, ಶಶಿ, ಮೋಹನ್ ಕುಮಾರ್,  ಸೇರಿದಂತೆ ಇತರರು ಹಾಜರಿದ್ದರು.

Leave a Comment

error: Content is protected !!