ಸುದ್ದಿ360 ದಾವಣಗೆರೆ, ಏ. 22: ಮಾಯಕೊಂಡ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಒಟ್ಟಾಗಿ ಬಂಡಾಯ ಅಭ್ಯರ್ಥಿಯಾಗಿ ಶಿವಪ್ರಕಾಶ್ ರನ್ನು ಕಣಕ್ಕಿಳಿಸಿದ್ದಾರೆ. ಅಲ್ಲಿನ ಬಂಡಾಯವನ್ನು ಶಮನಗೊಳಿಸುವ ಪ್ರಯತ್ನ ನಡೆಯುತ್ತಿದೆ. ನಾಮ ಪತ್ರ ಹಿಂಪಡೆಯಲು ಇನ್ನೂ ಒಂದು ದಿನ ಕಾಲಾವಕಾಶ ಇದ್ದು ಬಂಡಾಯ ಶಮನವಾಗುವ ವಿಶ್ವಾಸವಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ತಿಳಿಸಿದರು.
ಈಗಾಗಲೇ ಬಂಡಾಯ ಎದ್ದಿರುವವರ ಜತೆ ಮಾತುಕತೆ ನಡೆಯುತ್ತಿದೆ. ಎಂದು ತಿಳಿಸಿದ ಅವರು, ನಾಮಪತ್ರ ವಾಪಸ್ ತೆಗೆಸುತ್ತೇವೆ. ಎಲ್ಲೂ ಬಂಡಾಯವಾಗಲು ಬಿಡುವುದಿಲ್ಲ. ಮಾಡಾಳ್ ಮಲ್ಲಿಕಾರ್ಜುನ್ ಜತೆ ಮಾತುಕತೆ ನಡೆದು ಟಿಕೆಟ್ ನೀಡಿದ್ದರೂ ಅವರು ಬಂಡಾಯ ಎದ್ದ ಕಾರಣಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಹೇಳಿದರು.
ಹತ್ತಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದ ಮಾಯಕೊಂಡ ಕ್ಷೇತ್ರದಲ್ಲಿನ ಸಮೀಕ್ಷೆ ಪ್ರಕಾರ ಬಸವರಾಜ್ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಯಿತು. ಟಿಕೆಟ ಸಿಗದಿದ್ದಾಗ ಆಕಾಂಕ್ಷಿಗೆ ಅಸಮಧಾನ ಆಗೋದು ಸಹಜ. ಪಕ್ಷ ಯಾವ ತೀರ್ಮಾನ ತೆಗೆದುಕೊಂಡರೂ ನಾವು ತಲೆಬಾಗಲೇ ಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್, ಮುಖಂಡರಾದ ಡಿ.ಎಸ್. ಶಿವಶಂಕರ್ , ಸುಧಾ ಜಯರುದ್ರೇಶ, ಮತ್ತಿತರರು ಇದ್ದರು.