ಸುದ್ದಿ360 ದಾವಣಗೆರೆ, ಜೂನ್ 18: ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ-ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ನಿರಂತರ ಯಕ್ಷಗಾನ ತರಬೇತಿ ಶಿಬಿರ ಹಮ್ಮಿಕೊಂಡಿದೆ.
ತರಬೇತಿಯು ನಗರದ ಕೆ.ಬಿ. ಬಡಾವಣೆ, ಕುವೆಂಪು ರಸ್ತೆಯಲ್ಲಿರುವ (ಲಾಯರ್ ರಸ್ತೆ), ಕಲಾಕುಂಚ ಕಛೇರಿಯ ಸಭಾಂಗಣದಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ 6-30 ರಿಂದ 9-00 ಗಂಟೆಯವರೆಗೆ ನಡೆಯಲಿದ್ದು, ಈ ಶಿಬಿರವನ್ನು ಖ್ಯಾತ ವೃತ್ತಿನಿರತ ಯಕ್ಷಗಾನ ಕಲಾವಿದ ಹಟ್ಟಿಯಂಗಡಿ ಆನಂದಶೆಟ್ಟಿಯವರು ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಯಾವುದೇ ವಯಸ್ಸಿನ ಪರಿಮಿತಿ ಇಲ್ಲದೇ ಮಕ್ಕಳು, ಮಹಿಳೆಯರು, ಪುರುಷರು ಯಾರಾದರೂ ಭಾಗವಹಿಸಬಹುದಾಗಿದೆ. ಕರ್ನಾಟಕ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತ ಆರಾಧಾನ ಕಲೆ ಯಕ್ಷಗಾನವನ್ನು ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಪ್ರಸ್ತುತ ಪಡಿಸಿ ವೈಭವೀಕರಿಸುವ ಸದುದ್ದೇಶದಿಂದ ಈ ಕಾಯಕ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಖಜಾಂಚಿ ನೀಲಾವರ ಭಾಸ್ಕರನಾಯಕ್ ೯೪೪೯೩೭೪೩೦೦, ಶಿಬಿರದ ಸಂಚಾಲಕರಾದ ಪ್ರದೀಪ್ ಕಾರಂತ್ ೯೪೮೧೧೮೧೪೪೬, ೯೪೪೮೦೨೮೨೧೮ ಇವರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರಶೆಟ್ಟಿ ತಿಳಿಸಿದ್ದಾರೆ.