ಯಲ್ಲಮ್ಮ ದೇವಿ ದರ್ಶನಕ್ಕೆ ಹೊರಟಿದ್ದ ಆರು ಮಂದಿ ಭೀಕರ ಅಪಘಾತದಲ್ಲಿ ಸಾವು

ಸುದ್ದಿ360 ಬೆಳಗಾವಿ, ಜ.5: ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರ ಎಂಬಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿರುವುದಾಗಿ ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಮ್ಮ ದೇವಿ ದರ್ಶನಕ್ಕೆಂದು ಪ್ರಯಾಣಿಸುತ್ತಿದ್ದ ಜೀಪ್ ಆಲದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇದರಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹುಲಕುಂದ ಗ್ರಾಮದ ನಿವಾಸಿಗಳಾದ ಹನುಮವ್ವ, ದೀಪಾ, ಸವಿತಾ, ಸುಪ್ರೀತಾ, ಮಾರುತಿ ಮತ್ತು ಇಂದ್ರವ್ವ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ದುರ್ದೈವಿಗಳಾಗಿದ್ದಾರೆ.

Leave a Comment

error: Content is protected !!