ಸುದ್ದಿ360 ದಾವಣಗೆರೆ, ಜೂನ್ 18: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಇಂದು (ಜೂ.18) ಬೆಳಿಗ್ಗೆ 7 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಯೋಗನಡಿಗೆ ಮೋತಿ ವೀರಪ್ಪ ಕಾಲೇಜು ಕ್ರೀಡಾಂಗಣ ತಲುಪಿತು. ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ಯೋಗ ನಡಿಗೆಗೆ ಚಾಲನೆ ನೀಡಿದರು.
ನಗರದ 4 ವಲಯಗಳ 50ಕ್ಕೂ ಹೆಚ್ಚು ಶಾಲೆಗಳ 2000ಕ್ಕೂ ಅಧಿಕ ಮಕ್ಕಳು ಯೋಗನಡಿಗೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ, ಬಿ.ಸಿ. ಉಮಾಪತಿ, ಡಿಡಿಪಿಐ ತಿಪ್ಪೇಶಪ್ಪ, ಬಿಇಒ ನಿರಂಜನ್, ಆಯುಷ್ ಇಲಾಖೆಯ ಡಾ. ಶಂಕರಗೌಡ, ಯೋಗ ಒಕ್ಕೂಟದ ವಾಸುದೇವ ರಾಯ್ಕರ್, ಜಿ.ಪಂ ಉಪಕಾರ್ಯದರ್ಶಿ ಆನಂದ್, ಪ್ರಜ್ಞಾ ಅಮಿತ್, ಪಿ.ಎನ್. ಲೋಕೇಶ್, ಬಿಇಒ ಅಂಬಣ್ಣ ಇತರರು ಭಾಗವಹಿಸಿದ್ದರು.
ನಂತರ ವಚಾನಾನಂದ ಸ್ವಾಮಿಜಿ ಮಕ್ಕಳಿಗೆ ಸುಲಭ ಯೋಗಾಸನ ಹೇಳಿಕೊಟ್ಟರು.