ರಾಮನಗರ: ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಆತಂಕ

ಸುದ್ದಿ360 ರಾಮನಗರ, ಸೆ.10: ರಾಮನಗರ ತಾಲ್ಲೂಕಿನ ಹಲವಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇಂದು ಸಂಜೆ 5:40 ಹಾಗೂ 7:15 ರ ಸುಮಾರಿಗೆ ಎರಡು ಬಾರಿ ಭೂ ಕಂಪನ ಉಂಟಾಗಿರುವುದು ಜನರ ಅನುಭವಕ್ಕೆ ಬಂದಿದೆ.

ಎರಡು ಭಾರಿ ಕಂಪಿಸಿದ ಭೂಮಿ. ರಾಮನಗರ ತಾಲ್ಲೂಕಿನ ಬೆಜ್ಜರಹಳ್ಳಿ ಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ದ ಬಂದ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಭೂಕಂಪಿಸಿದ ಅನುಭವವಾಗಿದ್ದು, ಜನರು ಭಯದಿಂದ ಮನೆಯಿಂದ ಹೊರಗಡೆ ಬಂದಿದ್ದಾರೆ. ಭಾರಿ ಪ್ರಮಾಣದಲ್ಲಿ ಭೂಮಿ.ಕಂಪಿಸಿದ ಅನುಭವವಾಗಿದ್ದು, ಬೆಳಗ್ಗೆ 5.30 ರ ಸುಮಾರಿಗೆ ಪಾದರಹಳ್ಳಿ, ತಿಮ್ಮಸಂದ್ರ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಈಗ ಮತ್ತೆ ಅದೇ ಗ್ರಾಮದಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ.

admin

admin

Leave a Reply

Your email address will not be published. Required fields are marked *

error: Content is protected !!