ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್‍ ಜೀವನ್‍ ಸಾಗರ್ ಪ್ರಥಮ : ಮಂಜುನಾಥ್ ಗಡಿಗುಡಾಳ್‍ ರಿಂದ ಸನ್ಮಾನ

ಸುದ್ದಿ360 ದಾವಣಗೆರೆ, ಜೂನ್ 28: ಆತ್ಮ ರಕ್ಷಣೆ ಮತ್ತು ಏಕಾಗ್ರತೆಯ ಕರಾಟೆ ಕಲೆಯಲ್ಲಿ ಸಾಕಷ್ಟು ಪರಿಶ್ರಮ ವಹಿಸಿ ಕಠಿಣ ಅಭ್ಯಾಸ ಮಾಡಿರುವ ಇಲ್ಲಿನ ಜಯನಗರದ ಕರಾಟೆ ಕೇಸರಿ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಎಂ.‌ ಜೀವನ್ ಸಾಗರ್ ಪಂಜಾಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಮತ್ತು ರಾಜ್ಯದ ಹಿರಿಮೆಗೆ ಕಾರಣರಾಗಿದ್ದಾರೆ.

ಈ ಮೂಲಕ ರಾಷ್ಟ್ರಮಟ್ಟದಲ್ಲಿ ದಾವಣಗೆರೆಯನ್ನು ಗುರುತಿಸುವಂತೆ ಮಾಡಿರುವ ಎಂ.‌ ಜೀವನ್ ಸಾಗರ್ ಅವರನ್ನು ಎಂಸಿಸಿ ಬಿ ಬ್ಲಾಕ್ ನ ಈಜುಕೊಳ ಪಕ್ಕದ ಪಾರ್ಕ‍್‍  ಆವರಣದಲ್ಲಿರುವ ಪುನೀತ ಆನಂದಗೂಡಿನಲ್ಲಿ ಸನ್ಮಾನಿಸಲಾಯಿತು‌. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವಾರ್ಡ್ ನ ಜನರು ಜೀವನ್ ಸಾಗರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಮಂಜುನಾಥ್ ಗಡಿಗುಡಾಳ್ ಅವರು, ಕರ್ನಾಟಕ ರಾಜ್ಯ ಹಾಗೂ ದಾವಣಗೆರೆಗೆ ಕೀರ್ತಿ ತಂದಿರುವ ಈ ಕ್ರೀಡಾಪಟು ಮತ್ತಷ್ಟು  ಸಾಧನೆ ಮಾಡಲಿ ಎಂದು ಹಾರೈಸಿದರು. ಇನ್ನು ಹಲವು ಚಾಂಪಿಯನ್ ಶಿಪ್‌ನಲ್ಲಿ ಗೆದ್ದು ಬರಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತ ಸಾಧನೆ ಮಾಡುವಂತಾಗಲಿ. ನಾವು ಕೂಡ ನಮ್ಮ ಕೈಯಲ್ಲಾದ ಸಹಾಯ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ನವೀನ್ ನಲ್ವಾಡಿ, ಕಾರ್ತಿಕ್, ಧನುಷ್, ವಿನಯ್, ಹರೀಶ್, ಸಿದ್ದೇಶ್, ಮಹೇಶ್, ಕಿಟ್ಟಿ, ಆದರ್ಶ್, ಅನಿಲ್, ಮಧು, ನಿಖಿಲ್, ಮನು ಮತ್ತಿತರರು ಹಾಜರಿದ್ದರು.

Leave a Comment

error: Content is protected !!