ಸುದ್ದಿ360 ಮಂಡ್ಯ, ಜೂ.27: ಇನ್ನೇನು ಬಕ್ರೀದ್ ಸಮೀಪಿಸುತ್ತಿದ್ದಂತೆ ಕುರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಇಲ್ಲೊಬ್ಬ ರೈತನಿಂದ ಬಂಡೂರು ತಳಿಯ ಜೋಡಿ ಟಗರುಗಳು ಬರೋಬ್ಬರಿ 1.05 ಲಕ್ಷ ರೂ.ಗೆ ಬಿಕರಿಯಾಗಿವೆ.
ಮಂಡ್ಯ ತಾಲ್ಲೂಕಿನ ಕ್ಯಾತುಂಗೆರೆಯ ರೈತ ಶರತ್ ತಾನು ಕೊಂಡು ತಂದ ಈ ಮರಿಗಳನ್ನು ಕಳೆದ ಒಂದೂವರೆ ವರ್ಷದಿಂದ ಸಾಕಿದ ಮರಿಗಳು ಉತ್ತಮ ಬೆಲೆಗೆ ಮಾರಾಟವಾಗಿವೆ. ಮಂಡ್ಯದ ಮುಬಾರಕ್ ಬಾಬು ಬಕ್ರೀದ್ ಆಚರಣೆಗಾಗಿ ಈ ಟಗರುಗಳನ್ನು ಜೂ.24ರಂದು ಖರೀದಿಸಿದ್ದಾರೆ.
ರೈತ ಶರತ್ ಕಳೆದ ಮೂರ್ನಾಲ್ಕು ವರ್ಷದಿಂದ ಪ್ರತಿ ವರ್ಷ ಈ ರೀತಿ ಬಂಡೂರು ತಳಿಯ ಟಗರುಗಳನ್ನು ತಂದು ಬಕ್ರೀದ್ ಸಮಯದಲ್ಲಿ ಮಾರಾಟ ಮಾಡುತ್ತಾರೆ. ಕೃಷಿಯೊಂದಿಗೆ ಸಣ್ಣದಾಗಿ ಉಪಕಸುಬಾಗಿ ಟಗರು ಸಾಕಣೆಯನ್ನು ಮಾಡುವುದಾಗಿ ಹೇಳುವ ರೈತ ಶರತ್ ಕೃಷಿಯೊಂದಿಗೆ ಉಪಕಸುಬಾಗಿ ಕುರಿ ಸಾಕಣೆ ಲಾಭದಾಯಕ ಎಂಬುದನ್ನು ಸಾಬೀತು ಮಾಡಿದ್ದಾರೆ.