ವಿ.ಡಿ. ಸಾವರ್ಕರ್ ವಿವಾದ – ಡಾ. ಎಂ.ಬಿ. ಪಾಟೀಲ ಹೇಳಿದ್ದೇನು ?

ಕಾಂಗ್ರೆಸ್ ನಿಂದ ಕನ್ನಡ ಹೋರಾಟಗಾರರ ರಥಯಾತ್ರೆ

ಸುದ್ದಿ360 ವಿಜಯಪುರ, ಆ.25: ಬಿಜೆಪಿಯಿಂದ ವಿ.ಡಿ.ಸಾವರ್ಕರ್ ರಥಯಾತ್ರೆಗೆ ಪ್ರತ್ಯುತ್ತರವಾಗಿ ಕನ್ನಡ ನಾಡಿನ ಹೋರಾಟಗಾರರ ರಥಯಾತ್ರೆಗೆ ಕಾಂಗ್ರೆಸ್ ಸಿದ್ದವಾಗಿದೆ.

ವೀರ ರಾಣಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು, ಸುರಪುರ ನಾಯಕರು….ಹೀಗೆ ಅನೇಕ ಹೋರಾಟಗಾರರನ್ನು ಗೌರವಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ‌. ಪಾಟೀಲ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಪಾಟೀಲರು, ಬಿಜೆಪಿಗೆ ಕನ್ನಡದ ಹೋರಾಟಗಾರರು ಬೇಡವಾ? ಅವರ ಫೋಟೋ ತೆಗೆದುಕೊಂಡು ರಥ ಯಾತ್ರೆ ಮಾಡಲಿ, ಹಲಗಲಿಯ ಬೇಡರು, ಕಿತ್ತೂರ ಚೆನ್ನಮ್ಮ, ಸುರಪುರ ಅರಸರು ಬೇಡವಾ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ನಾಡಿನ ಬಸವಣ್ಣ, ಮೈಸೂರು ಅರಸು ಫೋಟೋ ಹಾಕಿ. ವಿವಾದಾತ್ಮಕ ವ್ಯಕ್ತಿಯೇ ಬೇಕಾ? ಕಿತ್ತೂರ ಚೆನ್ನಮ್ಮ ಬ್ರಿಟಿಷರ ಕ್ಷಮೆ ಕೇಳಿಲ್ಲ, ಸಂಗೊಳ್ಳಿ ರಾಯಣ್ಣ ಕ್ಷಮೆ ಕೇಳಿಲ್ಲ. ಹಲಗಲಿ ಬೇಡರು ಕ್ಷಮಾಪಣೆ ಕೇಳಿಲ್ಲ. ಹಾಗಿದ್ದ ಮೇಲೆ ಇವರ ರಥಯಾತ್ರೆ ವಿವಾದಾತ್ಮಕ ವ್ಯಕ್ತಿಯ ಫೋಟೋ ಇಟ್ಟುಕೊಂಡು ರಥಯಾತ್ರೆ ಮಾಡೋದು ಬಿ.ಎಸ್. ಯಡಿಯೂರಪ್ಪ ಅವರಿಗೆ ಶೋಭೆ ತರಲ್ಲ ಎಂಬುದಾಗಿ ಪಾಟೀಲರು ಹೇಳಿದ್ದಾರೆ.

ಕಾಂಗ್ರೆಸ್ ಶೀಘ್ರವೇ ನಾಡಿನ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಲಿದೆ. ಶೀಘ್ರದಲ್ಲಿಯೇ ದಿನ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

Leave a Comment

error: Content is protected !!