ವೇತನ ಪರಿಷ್ಕರಣೆ ಇಂದು ಇತ್ಯರ್ಥ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉತ್ತರ ಕನ್ನಡ ( ಸಿದ್ಧಾಪುರ) ಫೆ. 28:  ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಇಂದು ಸಂಜೆ ವೇತನ ಆಯೋಗ ಹಾಗೂ  ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು  ಇಂದು ಸಿದ್ಧಾಪುರ ವಿವಿಧ  ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ  ನೀಡಿದರು.

ಸರ್ಕಾರಿ ನೌಕರರು ನಮ್ಮವರು. ಅವರ ವೇತನ  ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮಧ್ಯಂತರ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಬೇಡಿಕೆ ಇದೆ. ಆಯೋಗದ ಸಂಪರ್ಕದಲ್ಲಿ ರಾಜ್ಯ ಸರ್ಕಾರವಿದ್ದು, ಕೂಡಲೇ ಮಧ್ಯಂತರ ವರದಿ ನೀಡಲು ಕೋರಲಾಗಿದೆ ಎಂದರು.

ವಿಧಾನಸಭೆಯಲ್ಲಿಯೂ ಈ ಬಗ್ಗೆ ಸ್ಪಷ್ಟಪಡಿಸಲಾಗಿದೆ.  ವೇತನ ಆಯೋಗ ರಚನೆಯಾದ ನಂತರ ಅದರ ಶಿಫಾರಸ್ಸುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದರು.

Leave a Comment

error: Content is protected !!