ಸುದ್ದಿ೩೬೦ ದಾವಣಗೆರೆ ಜ.೧೨: ಆಂಜನೇಯ ಬಡಾವಣೆಯಿಂದ ಹದಡಿ ರಸ್ತೆ ಸೀಳಿಕೊಂಡು ಶಾಮನೂರು ರಸ್ತೆಗೆ ಜೋಡಿಸುವ ಅತೀ ಪ್ರಮುಖ ರಸ್ತೆ ಉನ್ನತೀಕರಿಸಿ ಹೊಸ ಡಾಂಬರು ರಸ್ತೆ ಕಾಮಗಾರಿಗೆ ಮಂಜೂರಾತಿ ದೊರೆತು ಒಂದು ವರ್ಷವಾದರು ಇದುವರೆಗೂ ಕಾಮಗಾರಿ ಕೈಗೆತ್ತಿಕೊಳ್ಳದಿರುವ ಬಗ್ಗೆ ನಗರದ ಸಿದ್ದವೀರಪ್ಪ ಬಡಾವಣೆ ಸುತ್ತಮುತ್ತನ ನಾಗರೀಕರು ಕಿಡಿಕಾರಿದ್ದಾರೆ.
ಇದು ಮುಖ್ಯ ರಸ್ತೆಯಾಗಿದ್ದು, ಜನ ಸಂಚಾರ, ಸರಕು ಸಾಗಣೆ ಮತ್ತು ಇತರೆ ಕಾರಣಗಳಿಂದ ಕಾಂಕ್ರೀಟ್ ರಸ್ತೆ ಮಾಡುವಂತೆ ಈಗಾಗಲೇ ಮಹಾಪೌರರು, ಆಯುಕ್ತರು, ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸಂಸದರಿಗೆ ನಾಲ್ಕೈದು ಬಾರಿ ಮನವಿ ಸಲ್ಲಿಸಿದರೂ ಕಾಮಗಾರಿ ಕೈಗೆತ್ತಿಕೊಳ್ಳುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ನಾಗರೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೂಡಲೇ ಜಿಲ್ಲಾಡಳಿತಕ್ಕೆ, ಮಹಾನಗರ ಪಾಲಿಕೆಗೆ ಸೂಕ್ತ ನಿರ್ದೇಶನ ನೀಡಿ ಮುಂದಿನ ತಿಂಗಳ ಫೆಬ್ರವರಿ ಒಳಗಾಗಿ ಕಾಮಗಾರಿ ಪ್ರಾರಂಭಕ್ಕೆ ಮುಂದಾಗದಿದ್ದರೆ ಇಲ್ಲಿನ ನಾಗರೀಕರು ಸೂಕ್ತ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಸಿದ್ದವೀರಪ್ಪ ಬಡಾವಣೆಯ ೧೦ನೇ ಕ್ರಾಸ್‌ನ ಸುತ್ತಮುತ್ತಲಿನ ನಿವಾಸಿಗಳಾದ ಸಂಗಮೇಶ್ವರ, ಪುಟ್ಟಪ್ಪ, ಜಯಪ್ಪ, ಗೌರಮ್ಮ, ಆನಂದ್, ಕಲ್ಲಪ್ಪ ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.