ಸಂತ ಪೌಲರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ

ಸುದ್ದಿ360, ದಾವಣಗೆರೆ ಜು.28: ನಗರದ ಪಿ.ಜೆ. ಬಡಾವಣೆಯ ಸಂತ ಪೌಲರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಾಣಿಜ್ಯ ವಿಭಾಗದ ಸೌಮ್ಯ ಜಿ (97%), ಪೂಜಾ ಎಂ.ಜಿ. (96.83%) ಮತ್ತು ವಿಜ್ಞಾನ ವಿಭಾಗದ ಸಹನ  ಎ ಆರ್ (97.17%), ಭಾಗ್ಯಶ್ರೀ ಎಸ್ ಎ (96.5%) ಇವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಜರಿ, ಕಾಲೇಜಿನ ಆಡಳಿತಾಧಿಕಾರಿ ಸಿಸ್ಟರ್ ಆಲ್ಟಿನ, ಮುಖ್ಯ ಅತಿಥಿಗಳಾಗಿ ಜೀವಶಾಸ್ತ್ರ  ಉಪನ್ಯಾಸಕ ಸಂಪತ್ ಕುಮಾರ್ ಕೆ., ಕಾಲೇಜಿನ ಪ್ರಾಚಾರ್ಯರಾದ ಮೇಘನಾಥ ಕೆ.ಟಿ. ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Comment

error: Content is protected !!