ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಸುದ್ದಿ360 ದಾವಣಗೆರೆ ಡಿ.25: ನಗರದ ಎಸ್.ಓ.ಜಿ ಕಾಲೋನಿಯ ಫಕೀರಪ್ಪ ಗೋಕಾವಿ, ಚಂದ್ರಮ್ಮ ಗೋಕಾವಿ ಎಂಬ ವೃದ್ಧ ದಂಪತಿ ಒಂದೇ ದಿನ ಸಾವನ್ನಪ್ಪುವ ಮೂಲಕ ಸಾವಲ್ಲೂ ಒಂದಾಗಿದ್ದಾರೆ.
85 ವರ್ಷದ ಫಕೀರಪ್ಪ ಗೋಕಾವಿ ಶನಿವಾರ (ಡಿ.24) ರಾತ್ರಿ ಹೃದಯಾಘಾತದಿಂದ ಮನೆಯಲ್ಲೇ ನಿಧನ ಹೊಂದಿದ್ದಾರೆ. ಪತಿಯ ನಿಧನ ಹೊಂದಿರುವರೆಂದು ತಿಳಿಯುತ್ತಿದ್ದಂತೆ ಪತ್ನಿ ಚಂದ್ರಮ್ಮ ಗೋಕಾವಿ ಸ್ಥಳದಲ್ಲೇ ಅಸ್ವಸ್ಥರಾಗಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
55 ವರ್ಷಗಳ ದಾಂಪತ್ಯ ಜೀವನ ನಡೆಸಿ, ಅನ್ಯೋನ್ಯವಾಗಿ ಬದುಕಿದ್ದ ದಂಪತಿಗಳು ಇಹಲೋಕ ತ್ಯಜಿಸುವ ಮೂಲಕ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!