ಸಿದ್ಧಗಂಗಾ ಕಾಲೇಜಿಗೆ ಉತ್ತಮ ಫಲಿತಾಂಶ

ಸುದ್ದಿ360 ದಾವಣಗೆರೆ, ಜೂನ್ 18: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ದಾವಣಗೆರೆಯ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಎಲ್. ವಿನಾಯಕ 593 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಂ.ಡಿ. ಚಿನ್ಮಯ್ 591, ಎಸ್.ಆರ್. ರಕ್ಷಿತಾ 589, ದಿವ್ಯಶ್ರೀ 589, ಸೋನು ನಿಂಗರೆಡ್ಡಿ 588, ರಾಘವೇಂದ್ರ 587, ವಿ. ಕಿರಣ್ ಗಿ 586, ಮಂಜುನಾಥ ಸ್ವಾಮಿ 586, ಎನ್.ಯು. ಪೂಜಾ 585 , ಟಿ.ಎ. ಶಾಹಿದ್ ಹುಸೇನ್ 585 ಮತ್ತು ಸಿದ್ಧನಗೌಡ ಹಿತ್ತಲಮನಿ 585 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಸಿದ್ಧಗಂಗಾ ಕಾಲೇಜಿನ ಎಲ್. ವಿನಾಯಕ್‌ಗೆ ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಸಿಹಿ ತಿನಿಸಿದರು. ಡಾ. ಜಯಂತ್ ಇದ್ದರು.

ವಿಷಯವಾರು 100ಕ್ಕೆ 100

ಗಣಿತ 141, ರಸಾಯನಶಾಸ್ತ್ರ 22, ಜೀವಶಾಸ್ತ್ರ -16, ಭೌತಶಾಸ್ತ್ರ 14, ಕಂಪ್ಯೂಟರ್ ಸೈನ್ಸ್-9, ಸಂಸ್ಕೃತ 2 ಮತ್ತು ಹಿಂದಿ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ ಸೇರಿ ಒಟ್ಟು 205 ಮಕ್ಕಳು ನೂರಕ್ಕೆ ನೂರು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

307 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ, 351 ಮಕ್ಕಳು ಪ್ರಥಮ ದರ್ಜೆ ಮತ್ತು 20 ಮಕ್ಕಳು ದ್ವಿತೀಯ ದರ್ಜೆಯಲ್ಲಿ ಉತ್ತಿರ್ಣರಾಗಿ ದಾಖಲೆ ಫಲಿತಾಂಶ ನೀಡಿದ್ದಾರೆ. ಅಮೋಘ ಫಲಿತಾಂಶ ನೀಡಿದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯರಾದ ಜಿ.ಸಿ. ನಿರಂಜನ್, ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ವ್ಯವಸ್ಥಾಪಕ ನಿರ್ದೇಶಕ ಡಾ. ಜಯಂತ್, ಸಂಸ್ಥೆ ಕಾರ್ಯದರ್ಶಿ ಡಿ.ಎಸ್. ಹೇಮಂತ್, ಮತ್ತು ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!