ಸಿದ್ಧರಾಮಯ್ಯಗೆ ಕುರಿ – ಕಂಬಳಿಯೊಂದಿಗೆ ಭವ್ಯ ಸ್ವಾಗತ ನೀಡಿದ ಕಾರ್ಯಕರ್ತರು

ಸುದ್ದಿ360, ಬೆಳಗಾವಿ  ಜ.11: ಕಾಂಗ್ರೆಸ್ ನ ಬಸ್ ಯಾತ್ರೆ ಅಂಗವಾಗಿ ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಮಾಜಿಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮ ಬಳಿ ಭಾರಿ ಸ್ವಾಗತ ಕಾದಿತ್ತು.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಾಮಯ್ಯರಿಗಾಗಿ ಕುರಿ ಮತ್ತು ಕಂಬಳಿಯನ್ನು ಉಡುಗೊರೆಯಾಗಿ ನೀಡಿ ಸ್ವಾಗತಿಸಿದರು.

ಶಂಭು ಕಲ್ಲೋಳ್ಕರ್, ಧೂಳಗೌಡ ಪಾಟೀಲ್ ನೇತೃತ್ವದಲ್ಲಿ ರಾಯಭಾಗ ಮತಕ್ಷೇತ್ರದಿಂದ  ಬೈಕ್ ರ್ಯಾಲಿ ಮೂಲಕ ಮಜಲಟ್ಟಿ ಗ್ರಾಮ ಬಳಿ ಆಗಮಿಸಿದ ಕಾರ್ಯಕರ್ತರು ಬೆಳಗಾವಿಯ ವೀರಸೌಧದಿಂದ ಚಾಲನೆ ಪಡೆದು ಆಗಮಿಸುತ್ತಿದ್ದ  ಬಸ್ ಯಾತ್ರೆಗೆಅದ್ದೂರಿ ಸ್ವಾಗತ ನೀಡಿ ಗಮನ ಸೆಳೆದರು.

Leave a Comment

error: Content is protected !!