ಸಿದ್ಧರಾಮೋತ್ಸವಕ್ಕೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

ಸುದ್ದಿ360 ಬಾಗಲಕೋಟೆ, ಸೆ.16: ಸಿದ್ಧರಾಮಾತ್ಸವಕ್ಕೆಂದು ದಾವಣಗೆರೆಗೆ ತೆರಳಿದಾಗ ಕಾಣೆಯಾಗಿದ್ದ ಜಮಖಂಡಿ ತಾಲೂಕಿನ ಅಡಿಹುಡಿಯ ಗಿರಿಮಲ್ಲಪ್ಪ ಖಂಡೇಕರ್ ಅವರನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಪತ್ತೆ ಮಾಡಿದ್ದಾರೆ. ಗಿರಿಮಲ್ಲಪ್ಪಗಾಗಿ ಶೋಧನೆ ಕೈಗೊಂಡಿದ್ದ ಪೊಲೀಸರು ಈ ವ್ಯಕ್ತಿ ಪತ್ತೆಯಾಗುತ್ತಿದ್ದಂತೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮದಿಂದ 50 ಜನ ಹುಬ್ಬಳ್ಳಿ ಗೆ ತೆರಳಿ ಗಿರಿಮಲ್ಲಪ್ಪ ಕರೆ ತಂದಿದ್ದಾರೆ. ಆತಂಕದಲ್ಲಿದ್ದ  ಗಿರಿಮಲ್ಲಪ್ಪ ಕುಟುಂಬದವರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

ಆ. 2 ರಂದು ದಾವಣಗೆರೆಗೆ ಸಿದ್ದರಾಮಯ್ಯ ಜನ್ಮದಿನ ಕ್ಕಾಗಿ ಗಿರಿಮಲ್ಲಪ್ಪ ಊರಿನವರೊಂದಿಗೆ ದಾವಣಗೆರೆಗೆ ತೆರಳಿದ್ದರು. ಆದರೆ ಸಮಾರಂಭ ಸ್ಥಳದಿಂದ ಕಾಣೆಯಾಗಿದ್ದರು. ನಂತರ ಗಿರಿಮಲ್ಲಪ್ಪ ನಡೆಯುತ್ತ, ಹಲವು ಬಾರಿ ನಾನಾ ವಾಹನಗಳಲ್ಲಿ ಹುಬ್ಬಳ್ಳಿ ತಲುಪಿದ್ದಾರೆ ಎನ್ನಲಾಗಿದೆ. ಕಳೆದ ಐದು ದಿನಗಳಿಂದ ಹುಬ್ಬಳ್ಳಿಯಲ್ಲೇ ಇರುವುದಾಗಿ ಅವರು ಹೇಳಿದ್ದಾರೆ.

ಗಿರಿಮಲ್ಲಪ್ಪ ಕಾಣೆಯಾದ ಬಗ್ಗೆ

ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಗ್ರಾಮಸ್ಥರೂ ನಾನಾ ತಂಡಗಳಲ್ಲಿ ಎಲ್ಲೆಡೆ ಶೋಧನೆ ನಡೆಸಿದ್ದರು. ಇತ್ತೀಚೆಗೆ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಡಿಹುಡಿ‌ ಗ್ರಾಮದ ಗಿರಿಮಲ್ಲಪ್ಪ ಕುಟುಂಬ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಗಿರಿಮಲ್ಲಪ್ಪ ಬರುತ್ತಾರೆ ಕಾಳಜಿ ಮಾಡಬೇಡಿ ಎಂದಿದ್ದರು.‌

Leave a Comment

error: Content is protected !!